ಚಳ್ಳಕೆರೆ : ಬಯಲು ಸೀಮೆಯಲ್ಲಿ ಕುಡಿಯುವ ನೀರಿನ ಬವಣಿಯನ್ನು ಸಂಪೂರ್ಣವಾಗಿ ತೊಲಗಿಸಿ ಸಮರ್ಪಕವಾಗಿ ಕುಡಿಯುವ ನೀರು ಸದ್ಬಳಕೆ ಮಾಡಿಕೊಳ್ಳಲು ಆಯೋಜಿಸಿದ್ದ ಎರಡು‌ ದಿನಗಳ ತರಬೇತಿ ಕಾರ್ಯಾಗಾರದಲ್ಲಿ ನೂತನ ನಗರಸಭೆ ಅಧ್ಯಕ್ಷೆ ಆರ್.ಮಂಜುಳಾ ಪ್ರಸನ್ನ ಕುಮಾರ್ ಭಾಗಿಯಾಗಿ ತರಬೇತಿ ಪಡೆದು ಬಯಲು ಸೀಮೆಯಲ್ಲಿ ಕಾರ್ಯಗತಗೊಳಿಸಲು ಸನ್ನದರಾಗಿದ್ದಾರೆ.

ಹೌದು ರಾಜ್ಯದಲ್ಲಿಯೇ ಅತೀ ಕಡಿಮೆ ಮಳೆ ಬೀಳುವ ಪ್ರದೇಶವೆಂದು ಕರೆಯಲ್ಪಡುವ ಚಳ್ಳಕೆರೆ ತಾಲ್ಲೂಕು ವರ್ಷದ ಉದ್ದಕ್ಕೂ ಕುಡಿಯುವ ನೀರಿನ ಭವಣಿ ಇರುತ್ತದೆ, ಇದರಿಂದ ನೀರಿನ ಬವಣೆ ತಪ್ಪಿಸಲು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಯೋಜನೆಗಳು ಅನುಕೂಲಕರವಾಗುತ್ತವೆ,

ಅದರಂತೆ ಮೈಸೂರಿನ ನಗರಾಭಿವೃದ್ಧಿ ತರಬೇತಿ ಕೇಂದ್ರದಲ್ಲಿ ಎರಡು ದಿನಗಳ ಕಾಲ ನಡೆಯುವ ಅಬ್ದುಲ್ ನಜೀರ್ ಸಾಬ್, ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಂಸ್ಥೆ ಹಾಗೂ ರಾಜ್ಯ ನಗರಾಭಿವೃದ್ಧಿ ಸಂಸ್ಥೆ (SIUD) ವತಿಯಿಂದ ನಡೆದ ಅಮೃತ್-2 ಯೋಜನೆ ಕುರಿತು ಎರಡು ದಿನಗಳ ತರಬೇತಿ ಕಾರ್ಯಾಗಾರದಲ್ಲಿ ಚಳ್ಳಕೆರೆ ನಗರಸಭೆಯ ನೂತನ ಅಧ್ಯಕ್ಷೆ ಆರ್.ಮಂಜುಳಾ ಪ್ರಸನ್ನ ಕುಮಾರ್ ಮಾಹಿತಿ ಪಡೆದುಕೊಂಡರು.

ಅದರಂತೆ ಎರಡು ದಿನಗಳ ಕಾಲ‌ ನಡೆಯುವ ಈ ತರಬೇತಿಗೆ ಅಧ್ಯಕ್ಷೆ ಮಂಜುಳಾ ರವರು ಭಾಗಿಯಾಗಿ ಬಯಲು ಸೀಮೆಯ ಕುಡಿಯುವ ನೀರಿನ ಬಗ್ಗೆ ತರಬೇತಿ ಪಡೆಯುವುದರ ಮೂಲಕ ಜಲ ಮೂಲ ಹಾಗೂ ಸ್ವಚ್ಚತೆ, ನೈರ್ಮಲ್ಯ ಬಗ್ಗೆ ಮಾಹಿತಿ ಪಡೆದರು.

ಇದೇ ಸಂಧರ್ಭದಲ್ಲಿ ಸದಸ್ಯರಾರ ಜಯಲಕ್ಷ್ಮಿ ಕೃಷ್ಣಮೂರ್ತಿ, ಕವಿತಾ ಬೋರಯ್ಯ ,ಇತರರು ಭಾಗಿಯಾಗಿದ್ದರು.

About The Author

Namma Challakere Local News
error: Content is protected !!