ಚಳ್ಳಕೆರೆ: ಜೀವ ಕೈಲಿಡಿದು ನೇತಾಡುತ್ತಾ ಓಡಾಡುವ
ವಿದ್ಯಾರ್ಥಿಗಳು
ಚಳ್ಳಕೆರೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಜೀವ
ಕೈಯಲ್ಲಿಡಿದು ಬಸ್ ಬಾಗಿಲ ಬಳಿ ನೇತಾಡಿಕೊಂಡು ಪ್ರಯಾಣಿಸುವ
ವಿಡಿಯೋ ವೈರಲ್ ಆಗಿದೆ. ಓಬಳಾಪುರದಿಂದ ಚಳ್ಳಕೆರೆವರೆಗೆ,
ಹಾಗೂ ಚಳ್ಳಕೆರೆ-ಚಿತ್ರದುರ್ಗ ಮಾರ್ಗದಲ್ಲಿ ವಿದ್ಯಾರ್ಥಿಗಳು ಪ್ರತಿದಿನ
ಇಂತಹ ದುಸ್ತರ ಪರಿಸ್ಥಿತಿಯಲ್ಲಿ ಪ್ರಯಾಣಿಸುತ್ತಿದ್ದಾರೆ. ಸೂಕ್ತ
ಬಸ್ ವ್ಯವಸ್ಥೆ ಇಲ್ಲದಿರುವುದೇ ಈ ಸಮಸ್ಯೆಗೆ ಕಾರಣವಾಗಿದ್ದು,
ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೂಡಲೇ ಈ ಬಗ್ಗೆ
ಗಮನಹರಿಸಿ ಪರಿಹಾರ ಕಲ್ಪಿಸಬೇಕಿದೆ.

