ಚಳ್ಳಕೆರೆ : ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬಂಡೆ ಹಟ್ಟಿ ನನ್ನಿವಾಳ ಕ್ಲಸ್ಟರ್ ಚಳ್ಳಕೆರೆ ತಾಲೂಕು ಪೋಷಕರ ಮತ್ತು ಶಿಕ್ಷಕರ ಮಹಾಸಭೆ 2025- 26 ಹಾಗೂ ಮಕ್ಕಳ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂಸಿ ಅಧ್ಯಕ್ಷ‌ G ಗೋವಿಂದರಾಜು ವಹಿಸಿದ್ದರು.

ಶಾಲಾ ಮುಖ್ಯೋಪಾಧ್ಯಾಯರಾದ R ನಾಗರಾಜು ಮಾತನಾಡಿ, ಶಾಲೆಯ‌ ಸರ್ವತೋಮುಖ ಅಭಿವೃದ್ಧಿಗೆ ಎಸ್ ಡಿಎಂಸಿ ಪ್ರಮುಖ ಪಾತ್ರವಾಹಿಸಲಿದೆ‌, ಶಾಲೆಯ ಆಡಳಿತ ಹಾಗೂ ಶೈಕ್ಷಣಿಕವಾಗಿ ಮಕ್ಕಳ ಕಲಿಕೆಗೆ‌ ಹಿಂಬು ನೀಡಲು ಗ್ರಾಮ ಪೋಷಕರು ಸಹಕರಿಸಿದಲ್ಲಿ ಮಾತ್ರ ಸರಕಾರಿ ಶಾಲೆ ಗುಣಮಟ್ಟದ ಕಲಿಕೆಗೆ‌ ಸಹಕರಿಯಾಗಲಿದೆ ಎಂದರು.

ಸಹ ಶಿಕ್ಷಕರಾದ H.ಹನುಮಂತಪ್ಪ ಮಾತನಾಡಿ, ಶಾಲೆ ಕಲಿಕೆ ಮತ್ತು ಅಭಿವೃದ್ಧಿ ಕುರಿತು ಮಾಹಿತಿ ನೀಡಿದರು, ಹಾಗೂ ಸರ್ಕಾರ ನೀಡುವಂತಹ ಪ್ರೋತ್ಸಾಹದಾಯಕ ವಾದ ಕಾರ್ಯಕ್ರಮಗಳನ್ನು ಪೋಷಕರಿಗೆ ಮನವರಿಕೆ ಮಾಡಿಕೊಟ್ಟರು ಹಾಗೂ ಮಕ್ಕಳ ಗುಣಾತ್ಮಕ ಶಿಕ್ಷಣದ ಬಗ್ಗೆ ಶಿಕ್ಷಕರು ಹೆಚ್ಚಿನ ಆಸಕ್ತಿ ಕಲಿಸಬೇಕೆಂದರು.

ಇದೇ ಸಂಧರ್ಭದಲ್ಲಿ ಎಸ್ ಡಿಎಂಸಿ ಉಪಾಧ್ಯಕ್ಷೆ ಸಿಂತ್ಲಮ್ಮ , ಸದಸ್ಯೆ ಕಲ್ಪನಾ ,ಮಹಾದೇವಿ, ಓಬಯ್ಯ ಮಂಜಮ್ಮ, ಅಜ್ಜಣ್ಣ, ತಿಪ್ಪಮ್ಮ ಗ್ರಾಮ ಪಂಚಾಯಿತಿ ಸದಸ್ಯರಾದ G ತಿಪ್ಪೇಸ್ವಾಮಿ, ಗೀತಾ, ಪಾಪಯ್ಯ,
ಊರಿನ ಮುಖಂಡರಾದ ರಾಮಯ್ಯ, ತೊಡ್ಲ ಪಾಲಯ್ಯ J, ತಿಪ್ಪೇಸ್ವಾಮಿ, ಅಂಗನವಾಡಿ ಕಾರ್ಯಕರ್ತೆಯಾದ P ಗಿರಿಜಾ,ಸಹಾಯಕಿ ಮಧುಕಲ ಶಿಕ್ಷಕರು ಪೋಷಕರು ಇದ್ದರು.

About The Author

Namma Challakere Local News
error: Content is protected !!