ಚಳ್ಳಕೆರೆ :
ಚಿತ್ರದುರ್ಗ: ನೇರ ರೈಲ್ವೆಗೆ 150 ಕೋಟಿ ಬಿಡುಗಡೆ
ಮಾಡಿದೆ
ದಾವಣಗೆರೆ, ಚಿತ್ರದುರ್ಗ ತುಮಕೂರು ನೇರ ರೈಲ್ವೆ ಮಾರ್ಗಕ್ಕಾಗಿ
ಕೇಂದ್ರ ಸರ್ಕಾರ, 150 ಕೋಟಿ ಅನುದಾನ ಬಿಡುಗಡೆ ಮಾಡಿದೆ
ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
ಚಿತ್ರದುರ್ಗದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತಾಡಿ, ಕೂಡಲೇ
ಟೆಂಡರ್ ಕರೆಯುವಂತೆ ಒತ್ತಡವನ್ನು ಹಾಕುತ್ತೇನೆ. ರಾಜ್ಯ
ಸರ್ಕಾರ ಭೂ ಸ್ವಾಧೀನ ಮಾಡಿಕೊಡುವ ಕೆಲಸ ಮಾಡಬೇಕು.
ರಾಜ್ಯ ಸರ್ಕಾರ ಅರ್ಥಿಕವಾಗಿ ದಿವಾಳಿ ಆಗಿದೆ. ಪೂರ್ತಿ ಹಣ
ನೀವೆ ಬಿಡುಗಡೆ ಮಾಡಿ ಎಂದು ಮನವೊಲಿಸಿ, ಹಣ ಬಿಡುಗಡೆ
ಮಾಡಿಸಿದ್ದೇನೆಂದರು.

