ಎಸ್. ಆರ್. ಎಸ್ ಹೆರಿಟೇಜ್ ಸಂಸ್ಥೆಯಲ್ಲಿ 77ನೇ ಗಣರಾಜ್ಯೋತ್ಸವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಚಳ್ಳಕೆರೆ: ನಗರದ ಎಸ್. ಆರ್. ಎಸ್ ಹೆರಿಟೇಜ್ ಶಾಲೆಯಲ್ಲಿ ಇಂದು 77ನೇ ಗಣರಾಜ್ಯೋತ್ಸವವನ್ನು ತಾಯ್ನಾಡಿಗಾಗಿ ವೀರಮರಣವನ್ನು ಹೊಂದಿದ ಹುತಾತ್ಮ ಎಂ. ಮುರಳಿ ನಾಯಕ್ ಅವರ ( ಆಪರೇಷನ್ ಸಿಂಧೂರ್ ನಲ್ಲಿ ವೀರ ಮರಣವನ್ನಪ್ಪಿದರು)
ತಂದೆ ಶ್ರೀ ರಾಮನಾಯಕ್ ಅವರಿಗೆ ಗೌರವ ಧನವನ್ನು ಸಲ್ಲಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಎಸ್. ಆರ್. ಎಸ್ ಸಂಸ್ಥೆಯ ವಿದ್ಯಾರ್ಥಿಗಳು ಪ್ರತಿ ವರ್ಷ ಸೈನಿಕರ ಸಹಾಯ ನಿಧಿಗೆ ದೇಣಿಗೆಯನ್ನು ನೀಡುತ್ತಾರೆ . ಈ ದೇಣಿಗೆ ಮೊತ್ತಕ್ಕೆ ಸಂಸ್ಥೆಯ ಅಧ್ಯಕ್ಷರಾದ ಬಿ. ಎ.ಲಿಂಗಾರೆಡ್ಡಿ ಹಾಗೂ ಕಾರ್ಯದರ್ಶಿ ಸುಜಾತಾ ಲಿಂಗಾರೆಡ್ಡಿ ರವರು ಇನ್ನೂ ಹೆಚ್ಚಿನ ಧನವನ್ನು ಸೇರಿಸಿ
ಒಟ್ಟು 1,50,000ರೂಗಳನ್ನು
ಹುತಾತ್ಮ ಮುರಳಿ ನಾಯಕ್ ಅವರ ತಂದೆ ಶ್ರೀ ರಾಮನಾಯಕ್ ಅವರಿಗೆ ಎಸ್. ಆರ್. ಎಸ್ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಬಿ. ಎಲ್ ಅಮೋಘ್ ಅವರು ಸನ್ಮಾನಿಸಿ ಗೌರವ ಪೂರ್ವಕವಾಗಿ ಅರ್ಪಿಸಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕುಮಾರಿ. ಹಾರಿಕ ಮಂಜುನಾಥ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ನಿಮ್ಮ ಮನೋಬಲವನ್ನು ಜಾಗೃತಗೊಳಿಸಿ ನಿಮ್ಮಲ್ಲಿರುವ
ದೇಶಭಕ್ತಿಯನ್ನು ಬಡಿದೆಬ್ಬಿಸಿ ಎಂದು ಹೇಳುತ್ತಾ ರಾಷ್ಟ್ರದ ರಕ್ಷಣೆಗಾಗಿ ಸದಾ ಸಿದ್ಧರಾಗಿರಿ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಎಂ ಮುರಳಿ ನಾಯಕ್
ಅವರ ಸೋದರ ಮಾವ ಗೋವಿಂದ ನಾಯಕ್,
ಹಾರಿಕಾ ಮಂಜುನಾಥ್ ಅವರ ತಂದೆ ಶ್ರೀ ಮಂಜುನಾಥ್, ತಾಯಿ ಶ್ರೀಮತಿ ರುಕ್ಮಿಣಿ ,
ಎಸ್ ಆರ್ ಎಸ್ ಹೆರಿಟೇಜ್ ಶಾಲೆಯ ಪ್ರಾಂಶುಪಾಲರಾದ ಶ್ರೀ ವಿಜಯ್ ಬಿ ಎಸ್, ಎಸ್ ಆರ್ ಎಸ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸತ್ಯನಾರಾಯಣ್, ವಿದ್ಯಾರ್ಥಿಗಳು, ಶಿಕ್ಷಕ ವೃಂದದವರು ಪೋಷಕರು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!