“ಜನಜೀವನದ ಮೇಲೆ ರಾಮಾಯಣ ಮತ್ತು ಶ್ರೀರಾಮನ ಪ್ರಭಾವ ಅಗಾಧವಾದದ್ದು”- ಮಾತಾಜೀ ತ್ಯಾಗಮಯೀ ಅಭಿಮತ.
ಚಳ್ಳಕೆರೆ-ಜನಜೀವನದಮೇಲೆ ರಾಮಾಯಣ ಮತ್ತು ಶ್ರೀರಾಮನ ಪ್ರಭಾವ ಅಗಾಧವಾದದ್ದು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ಅವರು ಅಭಿಪ್ರಾಯಪಟ್ಟರು. ನಗರದ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ “ಶ್ರೀರಾಮನವಮಿ”ಯ ಪ್ರಯುಕ್ತ ಹಮ್ಮಿಕೊಂಡಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಮಹರ್ಷಿ ವಾಲ್ಮೀಕಿ ವಿರಚಿತ ಶ್ರೀಮದ್ ರಾಮಾಯಣ ಮಹಾಕಾವ್ಯದ ಪ್ರತಿಯೊಂದು ಪಾತ್ರಗಳು ನಮ್ಮ ನಿತ್ಯ ಬದುಕಿಗೆ ಬೇಕಾದ ಆದರ್ಶಗಳನ್ನು ಮತ್ತು ಮೌಲ್ಯಗಳನ್ನು ಕಟ್ಟಿಕೊಡುತ್ತವೆ. ಶ್ರೀರಾಮನ ವ್ಯಕ್ತಿತ್ವ ಮತ್ತು ಚಾರಿತ್ರ್ಯ ಉತ್ತಮ ಬದುಕಿಗೆ ಮಾದರಿಯಾಗಿ ನಿಲ್ಲುತ್ತದೆ ಎಂದರು. ಶ್ರೀರಾಮನವಮಿಯ ಪ್ರಯುಕ್ತ ನಗರದ ಶ್ರೀಬ್ರಹ್ಮಚೈತನ್ಯ ಮಂದಿರದ ಸದ್ಭಕ್ತ ಮಂಡಳಿಯ ಸದಸ್ಯರು ವಿಶೇಷ ಶ್ರೀರಾಮನ ಕುರಿತ ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.ಈ ಸತ್ಸಂಗ ಕಾರ್ಯಕ್ರಮದಲ್ಲಿ ಸದ್ಭಕ್ತರಾದ ರವೀಂದ್ರನಾಥ್, ಸುಬ್ಬಣ್ಣ,ಪ್ರಕಾಶ್, ಸುಮ,ಗುರುನಾಥಗುಪ್ತ, ಟಿ.ಎಂ ವಿಜಯಕಲಾ ಗುರು ,ಶಿಶಿರ, ಲಕ್ಷ್ಮೀದೇವಮ್ಮ , ಮಾಣಿಕ್ಯ ಸತ್ಯನಾರಾಯಣ, ರತ್ನಮ್ಮ ಚೆನ್ನಬಸಪ್ಪ, ಅಂಬುಜಾ ಶಾಂತಕುಮಾರ್, ಕಾವೇರಿ,ಪಂಕಜ, ಅಶ್ವಿನಿ, ಸುಮನ ಕೋಟೇಶ್ವರ, ಗೀತಾ ನಾಗರಾಜ್, ಗೀತಾ ವೆಂಕಟೇಶರೆಡ್ಡಿ, ಸರಸ್ವತಮ್ಮ ಗೋವಿಂದರಾಜು, ಪ್ರೇಮಲೀಲಾ,ಲತಾ ಭಕ್ತವತ್ಸಲ, ವೆಂಕಟೇಶ್,ಯತೀಶ್ ಎಂ ಸಿದ್ದಾಪುರ, ಸಂತೋಷ್,ಚೇತನ್,ಡಾ.ಭೂಮಿಕ, ಮಂಜುಳ, ಸಂತೋಷ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

