“ಶ್ರೀರಾಮನ ಆದರ್ಶ ಗುಣಗಳನ್ನು ರೂಢಿಸಿಕೊಳ್ಳಬೇಕು”-ಆಧ್ಯಾತ್ಮಿಕ ಚಿಂತಕ ಅನಂತರಾಮ್ ಗೌತಮ್ ಅಭಿಪ್ರಾಯ.

ಚಳ್ಳಕೆರೆ- ಶ್ರೀರಾಮಚಂದ್ರನ ಆದರ್ಶ ಗುಣಗಳನ್ನು ನಮ್ಮ ನಿತ್ಯ ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದು ಚಳ್ಳಕೆರೆ ನಗರದ ಆಧ್ಯಾತ್ಮಿಕ ಚಿಂತಕರು ಮತ್ತು ಖ್ಯಾತ ಜ್ಯೋತಿಷಿಗಳಾದ ಶ್ರೀಅನಂತರಾಮ್ ಗೌತಮ್ ಅವರು ಅಭಿಪ್ರಾಯಪಟ್ಟರು. ನಗರದ ನಾಯಕನಹಟ್ಟಿ ರಸ್ತೆಯಲ್ಲಿರುವ ಶ್ರೀಕರೇಕಲ್ ಆಂಜನೇಯ ಸ್ವಾಮಿಯ ಸನ್ನಿಧಿಯಲ್ಲಿ ಶ್ರೀರಾಮನವಮಿಯ ಅಂಗವಾಗಿ ಆಯೋಜಿಸಿದ್ದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಶ್ರೀರಾಮನ ಗುಣವಿಶೇಷಗಳ ಬಗ್ಗೆ ಮಾತನಾಡಿದರು.

ಶ್ರೀರಾಮನವಮಿಯ ಪ್ರಯುಕ್ತ ನಗರದ ಶ್ರೀಬ್ರಹ್ಮಚೈತನ್ಯ ಮಂದಿರದ ಸದ್ಭಕ್ತ ಮಂಡಳಿಯಿಂದ ವಿಶೇಷ ಭಜನಾ ಕಾರ್ಯಕ್ರಮ ನಡೆಯಿತು.ಈ ಭಜನಾ ಕಾರ್ಯಕ್ರಮದಲ್ಲಿ ವೇದವಿದ್ವಾಂಸ ನಾಗಶಯನ ಗೌತಮ್, ರವೀಂದ್ರನಾಥ್, ಪ್ರಕಾಶ್,ಸುಮ, ಶ್ರೀಮತಿ ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಶೈಲಜ, ಹೇಮಂತ್ ಗೌತಮ್,ಶಕುಂತಲಾ, ಯತೀಶ್ ಎಂ ಸಿದ್ದಾಪುರ, ಸುಮಂಗಳಮ್ಮ, ಮಂಜುಳ ನಾಗರಾಜ್, ನಾಗಶ್ರೀ,ಗೀತಾ ನಾಗರಾಜ್, ಚೈತ್ರ ,ಅನರ್ಘ್ಯ ಮಂಜುನಾಥ, ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.

About The Author

Namma Challakere Local News
error: Content is protected !!