ಚಳ್ಳಕೆರೆ :
2024_25ನೇ ಸಾಲಿನಲ್ಲಿ ಪ್ರಾರಂಭಿಸಿರುವ online cet/neet/jee ತರಗತಿಗಳಿಗೆ ಅನುಕೂಲವಾಗಲು 75″ ಗಳ ಐ ಆಕ್ಟೀವ್ ಕಂಪನಿಯ ಇನ್ ಟರಾಕ್ಟೀವ್ ಪರದೆಯನ್ನು ಇಲಾಖೆ ಚಳ್ಳಕೆರೆ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಒದಗಿಸಿರುವುದು ಸ್ವಾಗತಾರ್ಹ ಎಂದು ಕಾಲೇಜಿನ ಪ್ರಾಚಾರ್ಯರಾದ ಕೆ ತಿಮ್ಮಯ್ಯ ತಿಳಿಸಿದ್ದಾರೆ.
ಇದರಿಂದ ಗುಣಮಟ್ಟದ ಬೋಧನೆ ಮಾಡಲು ಅನುಕೂಲವಾಗಿದೆ. ಕಾಲೇಜಿನ ಎಲ್ಲಾ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ತರಗತಿಗಳಿಗೆ ತಪ್ಪದೆ ಹಾಜರಾಗಿ ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಹಿರಿಯ ಉಪನ್ಯಾಸಕರಾದ ಕೆ ವಸಂತಕುಮಾರ್, ಕುಮಾರಸ್ವಾಮಿ, ವಿಜ್ಞಾನ ಉಪನ್ಯಾಸಕರಾದ ಶಾಂತಕುಮಾರಿ, ಪುಟ್ಟರಂಗಪ್ಪ, ಮಹಂತೇಶ್ ಹಾಗೂ ನಾಗರಾಜ್ ಬೆಳಗಟ್ಟ ಉಪಸ್ಥಿತರಿದ್ದರು

