ಚಳ್ಳಕೆರೆ :
ವಿದ್ಯಾರ್ಥಿ ಜೀವನದಲ್ಲಿ
ಎಸ್ ಎಸ್ ಎಲ್ ಸಿ ಪರೀಕ್ಷಾ ಎಂಬುದು ಮೊದಲ ಗಟ್ಟವಾಗಿದೆ, ಆದ್ದರಿಂದ ಈ ಪರೀಕ್ಷೆಯನ್ನು ಉತ್ತಮವಾಗಿ ಎದುರಿಸಿದರೆ ಜೀವನದಲ್ಲಿ ಎಲ್ಲಿಯೂ ಕೂಡ ಹಿಂದೆ ಸರಿಯುವುದಿಲ್ಲ ಎಂದು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಮುಖ್ಯ ಶಿಕ್ಷಕರಾದ ಮಂಜುನಾಥ್ ಹೇಳಿದರು.
ಅವರು ನಗರದ ಕಿತ್ತೂರು ರಾಣಿ ಚೆನ್ನಮ್ಮ ವಸತಿಯುತ ಪ್ರೌಢಶಾಲೆಯಲ್ಲಿ ಶಾರದಪೂಜೆ ಹಾಗೂ ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ರವೇಶ ಪ್ರತಿಯನ್ನು ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು, ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ ಇದೆ, ಇಂದಿನ ಅಂಕಗಳು ನಿಮ್ಮಮುಂದಿನ ಭವಿಷ್ಯದ ಹಾದಿಗೆ ಸುಗಮವಾಗುತ್ತದೆ ಆದ್ದರಿಂದ ನಿಮ್ಮ ಪೋಷಕರು ಸರಕಾರಿ ವಸತಿ ಯುತ ಶಾಲೆಗಳಿಗೆ ಕಳಿಸುವುದು ಪೋಷಕರಿಗೆ ನೀವು ಕೊಡುವ ಕೊಡುಗೆಯಾಗಿದೆ ಎಂದರು.
ಇನ್ನೂ ಪ್ರತಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ರವೇಶ ಪ್ರತಿ ನೀಡಿದ ಶಿಕ್ಷಕರು ನಿಮ್ಮ ವಿದ್ಯಾರ್ಥಿ ಜೀವನ ಸುಗಮವಾಗಲಿ ಎಂದು ಎಲ್ಲಾ ಶಿಕ್ಷಕರು ಶುಭಾ ಹಾರೈಸಿದರು.

