ಚಳ್ಳಕೆರೆ :

ಚಳ್ಳಕೆರೆ ನಗರದ ವೆಂಕಟೇಶ್ ನಗರದಲ್ಲಿ ಇರುವ ವಿಶೇಷ ಚೇತನ ಬೆಳಕು ಶ್ರಾವಣ ದೋಷವುಳ್ಳ ಮಕ್ಕಳ ವಸತಿ ಶಾಲೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಚಳಕೆರೆ ತಾಲೂಕು ಘಟಕದ ವತಿಯಿಂದ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.

ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ, ಅದರಂತೆ ಮಹಿಳೆಯರ‌ ಪಾತ್ರ ಬಹುಮುಖ್ಯವಾಗಿರುತ್ತದೆ, ಇಂತಹ ಮಹಿಳೆಯರೆಲ್ಲರೂ ಸೇರಿ ಮಹಿಳಾ ದಿನಾಚರಣೆ ಆಚರಿಸುವುದು ಸಂತಸದ ವಿಷಯ ಹಾಗೂ ಇಂತಹ ವಿಶೇಷ ಚೇತನ ಮಕ್ಕಳಗೆ ಸಿಹಿಊಟ‌ ನೀಡಿ ಸಂಭ್ರಮಿಸುವುದು ಸಂತೋಷ ತಂದಿದೆ ಎಂದು ತಾಲೂಕು ಘಟಕದ ಉಪಾಧ್ಯಕ್ಷರಾದ ಭಾಗ್ಯಮ್ಮ ಹೇಳುತ್ತಾರೆ.

ಇದೇ ಸಂಧರ್ಭದಲ್ಲಿ ‌ ಮಹಿಳಾ ಸಂಘದ ಅಧ್ಯಕ್ಷರಾದ ಶಿಲ್ಪ ಪ್ರಕಾಶ್, ಹಾಗೂ ತಾಲೂಕು ಘಟಕದ ಉಪಾಧ್ಯಕ್ಷರಾದ ಭಾಗ್ಯಮ್ಮ,
ಕಾರ್ಯಕಾರಿಣಿ ಸಮಿತಿ ಸದಸ್ಯರು,
ಪುಷ್ಪ ಲತಾ ವಿಜಯ, ಉಮಾ ಶಿವಕುಮಾರ್, ಶಾಂತ ಜಗದೀಶ್, ಜಾನಕಿ, ಶುಭಾ, ತನುಜಾ, ಸವಿತಾ, ವಿಜಯಶ್ರೀ, ಪ್ರಮೀಲಾ, ಮಧುಮತಿ, ಗೀತಾ, ನೇತ್ರ, ಗೌರಿ, ಮಧುರಾ, ಸುಮಾಲತಾ, ಆಶಾ, ಹಾಗೂ ಶಾಲಾ ಶಿಕ್ಷಕರು, ಮಕ್ಕಳು, ಹಾಗೂ ಮಹಿಳಾ ಮಣಿಯರು ಹಾಜರಿದ್ದರು.

About The Author

Namma Challakere Local News
error: Content is protected !!