ಗಣೇಶೋತ್ಸವ-ಈದ್ ಮಿಲಾದ್ ಶಾಂತಿಸಭೆಯಲ್ಲಿ ವೃತ್ತ ನಿರೀಕ್ಷಕ ಹನುಮಂತಪ್ಪ ಎಂ. ಶಿರೇಹಳ್ಳಿ ಮಾತು.
ಗಣೇಶೋತ್ಸವ ಆಚರಣೆ ಸೌಹಾರ್ದಯುತವಾಗಿರಲಿ.
ನಾಯಕನಹಟ್ಟಿ::ಆ.20.
ವಿಶ್ವದಲ್ಲೇ ಏಕಾತೆಯಲ್ಲಿ ವಿವಿಧತೆಯನ್ನು ಹೊಂದಿರುವ ಭಾರತವಾಗಿದ್ದು ಇಡೀ ದೇಶವೇ ಆಚರಣೆ ಮಾಡುವಂತಹ ಹಬ್ಬಗಣೇಶಚತುರ್ಥಿಯಾಗಿದೆ ಎಂದು ತಳಕು ಮತ್ತು ನಾಯಕನಹಟ್ಟಿ ವೃತ್ತ ನಿರೀಕ್ಷಕ ಹನುಮಂತಪ್ಪ ಎಂ ಶಿರೇಹಳ್ಳಿ ಹೇಳಿದರು.
ಬುಧವಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗಣೇಶೋತ್ಸವ ಹಾಗೂ ಈದ್
ಮಿಲಾದ್
ಅಂಗವಾಗಿ
ಹಬ್ಬಗಳ ಹಮ್ಮಿಕೊಳ್ಳಲಾಗಿದ್ದ ಶಾಂತಿಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಪ್ರತಿಯೊಬ್ಬರೂ ಸಾಮಾಜಿಕ ಸ್ವಾಸ್ತಿಕ್ಕೆ ಧಕ್ಕೆ ಆಗದಂತೆ ಗಣೇಶ ಆಚರಣೆಗೆ ಇಲಾಖೆಯಿಂದ ಸಂಪೂರ್ಣ ಸಹಕಾರ ಇರುತ್ತದೆ ಆದ್ದರಿಂದ ಯಾರು ಸಹ ಡಿ ಜೆ ಗೆ ಅವಕಾಶ ಇರುವುದಿಲ್ಲ ಯಾರೇ ಆಗಲಿ ಡಿಜಿ ಹಾಕಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
ಗಣೇಶ ಹಬ್ಬದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಧರ್ಮಾತೀತವಾಗಿ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಡಿಜಿ ಕುಣಿಯುವುದೇ ಗಣೇಶ ಉತ್ಸವ ಅಲ್ಲ, ನಾಯಕನಹಟ್ಟಿ ಹೋಬಳಿಯಲ್ಲಿ ಎಂದಿಗೂ ಕೋಮು ಗಲಭೆ ನಡೆದಿಲ್ಲ. ಇದೊಂದು ಸಾಮರಸ್ಯದ ಕೇಂದ್ರವಾಗಿದೆ
ಪ್ರತಿ
ವರ್ಷವೂ ಅದ್ದೂರಿಯಾಗಿ ಆಚರಿಸಬೇಕು.
ಶಾಂತಿ-ಸಂಭ್ರಮದಿಂದ ಸಾರ್ವಜನಿಕ ಪೊಲೀಸ್ ಕಾಯ್ದೆ ಅನ್ವಯ ಸಾರ್ವಜನಿಕರಿಗೆ ತೊಂದರೆ, ಕರ್ಕಶ ಶಬ್ದ ಡಿಜಿ, ಇತರೆ ಉಂಟುಮಾಡುವ ಬಳಕೆಮಾಡಬಾರದು. ಧ್ವನಿವರ್ಧಕಗಳನ್ನು ಬಳಕೆ ಮಾಡಬಾರದು ಗಣೇಶ ಉತ್ಸವ ಸಮಿತಿಯವರು ಗ್ರಾಮ ಪಂಚಾಯತಿ. ಪಟ್ಟಣ ಪಂಚಾಯಿತಿ, ಬೆಸ್ಕಾಂ,ಅಗ್ನಿಶಾಮಕ
ಇಲಾಖೆಗಳಿಂದ ಅನುಮತಿ ಪೊಲೀಸ್ ಪಡೆದಿರಬೇಕು ಎಂದರು.
ಪಿಎಸ್ಐ ಪಾಂಡುರಂಗಪ್ಪ ಮಾತನಾಡಿ, ಸ್ನೇಹಿ ಗಣೇಶಮೂರ್ತಿ ಪರಿಸರ ಪ್ರತಿಷ್ಠಾಪಿಸಬೇಕು. ಸರ್ಕಾರದ ಆದೇಶದಂತೆ ಪರಿಸರಕ್ಕೆ ಪೂರಕವಾಗಿರಬೇಕು. ಗಣೇಶ ಹಬ್ಬ ಆಚರಣಾ ಸಮಿತಿ ಸದಸ್ಯರುಗಳ ಪಟ್ಟಿ, ನೀಡಬೇಕು ಗಣೇಶ ಮೂರ್ತಿಗಳನ್ನು
ಜಾಗರೂಕತೆಯಿಂದ ಕಾಪಾಡಬೇಕು ದಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗದಂತೆ ಹಬ್ಬ ಆಚರಣೆಯಾಗಬೇಕು ಎಂದು ತಿಳಿಸಿದರು.
ಇದೇ ವೇಳೆ ಪಟ್ಟಣ ಪಂಚಾಯತಿ ಮುಖ್ಯಧಿಕಾರಿ ಓ .ಶ್ರೀನಿವಾಸ್ ಮಾತನಾಡಿದರು ಪಟ್ಟಣ ಹಾಗೂ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಬ್ಬರು ಮಣ್ಣಿನ ಹಾಗೂ ಪರಿಸರ ಸ್ನೇಹಿ ಗಣಪತಿಯನ್ನು ಪ್ರತಿಷ್ಠಾಪಿಸಬೇಕು ಹಾಗೂ ಪಟ್ಟಣ ಪಂಚಾಯತಿಯಿಂದ ಅನುಮತಿ ಪರವನಗೆ ಪಡೆಯುವಂತೆ ಗಣಪತಿ ಮಂಡಳಿಯವರಿಗೆ ಸೂಚನೆ ನೀಡಿದರು
ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯರಾದ ಸೈಯದ್ ಅನ್ವರ್, ಜೆ ಆರ್ ರವಿಕುಮಾರ್, ಮುಖಂಡ ಎಂವೈಟಿ ಸ್ವಾಮಿ, ಪಟ್ಟಣ ಪಂಚಾಯತಿ ಮಾಜಿ ಸದಸ್ಯ ಟಿ ಬಸಪ್ಪ ನಾಯಕ, ಅಬೂಬಕರ್ ಸಿದ್ದಿಕ್, ಎಜಾದ್ ಅಹಮದ್, ಕೆಡಿಪಿ ಸದಸ್ಯ ಜಾಕಿರ್ ಹುಸೇನ್, ಕರವೇ ಕನ್ನಡ ಸೇನೆ ತಾಲೂಕು ಅಧ್ಯಕ್ಷ ಪಿ ಮುತ್ತಯ್ಯ ಜಾಗನೂರಹಟ್ಟಿ, ಡಿ.ಬಿ. ಬೋಸಯ್ಯ, ಗುಂತಕೋಲ್ಮನಹಳ್ಳಿ ಕೆ ತಿಪ್ಪೇಸ್ವಾಮಿ, ಪೊಲೀಸ್ ಸಿಬ್ಬಂದಿಗಳಾದ ಎಎಸ್ಐ ತಿಪ್ಪೇಸ್ವಾಮಿ, ಧನಂಜಯ, ಪೇದೆಗಳಾದ ಶ್ರೀಹರಿ ರಾಮಾಂಜನಿ, ರುದ್ರಪ್ಪ, ಅಣ್ಣಪ್ಪ ನಾಯ್ಕ, ದೇವರಾಜ್ ಕೋಟೆ, ಕುಮಾರ್, ಲೋಹಿತ್, ಮಹಿಳಾಪೇದೆ ಲಕ್ಷ್ಮಿ ದೇವಿ, ಸೇರಿದಂತೆ ಹೋಬಳಿಯ ಹಾಗೂ ಪಟ್ಟಣದ ಮುಖಂಡರು ಹಾಗೂ ಸಾರ್ವಜನಿಕರು ಇದ್ದರು

