ಚಳ್ಳಕೆರೆ :
ಜಿಲ್ಲೆಯ ಎರಡನೇ ಅತಿ ದೊಡ್ಡ ಜಾತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಶ್ರೀ ಗೌರಸಮುದ್ರ ಮಾರಮ್ಮ ದೇವಿ ಜಾತ್ರೆಗೆ ಬರುವ ಭಕ್ತರಿಗೆ ಯಾವುದೇ ರೀತಿಯಲ್ಲಿ ತೊಂದರೆ ಯಾಗದಂತೆ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕು ಎಂದು ಸಾರ್ವಜನಿಕರ ಆಗ್ರವಾಗಿದೆ.
ಅದರಂತೆ ಗೌರಸಮುದ್ರ ಮಾರಮ್ಮ ದೇವಿ ಉತ್ಸವ ನಡೆಯುವ ತುಮುಲು ಪ್ರದೇಶಕ್ಕೆ ತೆರಳಲು
ಬೇಡರೆಡ್ಡಿಹಳ್ಳಿ ಗ್ರಾಮದ ಸಸಿ ಮರದ ಕ್ರಾಸ್ ಇಂದ ಬುಕ್ಕಂಬೂದಿವರೆಗೆ ಹೋಗುವ ರಸ್ತೆ ದುರಸ್ತಿ ಯಾಗಿದ್ದು ತಗ್ಗು ಗುಂಡಿಗಳ ಸರಿಪಡಿಸಿ ಗೌರಸಮುದ್ರ ಮಾರಮ್ಮ ದೇವಿಯ ಜಾತ್ರೆಗೆ ಆಗಮಿಸುವ ಭಕ್ತಾದಿಗಳಿಗೆ ಅನುಕೂಲ ಮಾಡಬೇಕು ಎಂದು ಭಕ್ತರ ಒತ್ತಾಯವಾಗಿದೆ.
ಜಾತ್ರೆಯ ಸ್ಥಳಕ್ಕೆ ಇದು ಮುಖ್ಯ ರಸ್ತೆ ವಾಗಿರುವುದರಿಂದ ಆದಷ್ಟು ಬೇಗ ಇದನ್ನು ಸರಿಪಡಿಸಬೇಕೆಂದು ಮನವಿ ಮಾಡಿದ್ದಾರೆ.

