ಕಾರ್ಯನಿರತ ಪತ್ರಕರ್ತರ ವೇದಿಕೆ ಚಳ್ಳಕೆರೆ ಇವರ ವತಿಯಿಂದ ಸೋಮವಾರದಲ್ಲಿ ದಿನಾಂಕ 28 7 2025 ರಂದು ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ವೆಂಕಟೇಶ್ವರ ನಗರದ ಸರ್ಕಾರಿ ಪ್ರಾಥಮಿಕ ಶಾಲೆ ಹತ್ತಿರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯ ಅಂತ ರಾಜ್ಯ ಸಾಹಸಿ ಜ್ಯೋತಿರಾಜ್, ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಯಾದ ಕೆ ಎಸ್ ಸುರೇಶ್, ಉದ್ಘಾಟನೆಯನ್ನು ನೆರವೇರಿಸಿದರು.

ನಂತರ ಮಾತನಾಡಿದ ಸುರೇಶ್ ರವರು ಕಾರ್ಯನಿರತ ಪತ್ರಕರ್ತರ ವೇದಿಕೆ ವತಿಯಿಂದ ಮಕ್ಕಳಿಗೆ ಕಲಿಕಾ ಸಾಮಗ್ರಿ ಹಾಗೂ ನೋಟ್ ಬುಕ್ ವಿತರಣೆ ಮಾಡುವುದು ಸಂತಸ ತಂದಿದೆ, ಇನ್ನು ಹೆಚ್ಚು ಹೆಚ್ಚಾಗಿ ಕಾರ್ಯಕ್ರಮಗಳು ಮಾಡಿ ಎಂದು ಹೇಳಿ ಮಕ್ಕಳು ಶಾಲೆಗೆ ತಪ್ಪದೆ ಬರಬೇಕು, ಇವರು ನೀಡಿರುವ ನೋಟ್ ಬುಕ್ ಹಾಗೂ ಕಲಿಕಾ ಸಾಮಗ್ರಿಗಳನ್ನು ಬಳಸಿಕೊಂಡು ಓದುವುದರ ಮೂಲಕ ಸತ್ಪ್ರಜೆಗಳಾಗಿ, ಶಾಲೆಗೆ ಹಾಗೂ ಪೋಷಕರಿಗೆ ಕೀರ್ತಿ ತರಲು ಪ್ರಯತ್ನಿಸಿ.

ಜ್ಯೋತಿರಾಜ್ ಮಾತನಾಡಿ ನಾನು ತಮಿಳುನಾಡಿನಲ್ಲಿ ಬಡತನದಲ್ಲಿ ಹುಟ್ಟಿದ್ದು , ಕರ್ನಾಟಕದಲ್ಲಿ ಬೆಳೆದಿದ್ದು ಕರ್ನಾಟಕದಲ್ಲಿ ಸಾಧಿಸುವುದು, ಮಕ್ಕಳು ಇಂದ ಹೊರಗೆ ಬಂದು ಪುಸ್ತಕಗಳನ್ನು ಓದಿ, ಕಲಿಕೆಯಲ್ಲಿ ಆಸಕ್ತಿ ಬೆಳೆಸಿ, ಕ್ರೀಡೆಯಲ್ಲಿ ಭಾಗವಹಿಸಿ ಎಂದು ಹೇಳಿದರು, ನಾನು ಈ ಮಟ್ಟಕ್ಕೆ ಬೆಳೆದಿದ್ದು ಪತ್ರಕರ್ತರಿಂದ ಅದು ಮಾಧ್ಯಮದಿಂದ ಮಾತ್ರ ಸಾಧ್ಯ ಮಾಧ್ಯಮವು ಪ್ರಮುಖವಾಗಿದೆ ಎಲೆಮರೆಕಾಯಿಯಂತೆ ಇದ್ದ ನನ್ನನ್ನು ಬಹಳ ಎತ್ತರಕ್ಕೆ ಬೆಳೆಸಿದ್ದು ಪತ್ರಿಕಾ ರಂಗ ಈ ರಂಗದಲ್ಲಿ ಕೆಲಸ ಮಾಡುವವರನ್ನು ನಾನು ತುಂಬು ಹೃದಯದಿಂದ ಅಭಿನಂದಿಸುತ್ತೇನೆ,
ಶಾಸಕಾಂಗ ಕಾರ್ಯಾಂಗ ನ್ಯಾಯಾಂಗ ಹಾಗೂ ಪತ್ರಿಕಾ ರಂಗ ಇದು ಬಹುದೊಡ್ಡ ಜವಾಬ್ದಾರಿ ಪತ್ರಕರ್ತರು ಸಮಾಜದ ಅಂಕು ಡೊಂಕು ಪತ್ರಕರ್ತರು ಪತ್ರಿಕಾ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಹಾಗೂ ಕಲಿಕಾ ಸಾಮಗ್ರಿಗಳ ವಿತರಣೆ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಈ ಸಂದರ್ಭದಲ್ಲಿ ಅಧ್ಯಕ್ಷ ಪಿ ಗಂಗಾಧರ ಮಾತನಾಡಿ ಪತ್ರಕರ್ತರು ಪ್ರತಿನಿತ್ಯ ಸುದ್ದಿಗಳನ್ನು ಹೊತ್ತು ತರುವಂತ ಕೆಲಸ ಮಾಡುವ ಪತ್ರಕರ್ತರ ಸಮಸ್ಯೆಗೆ ಸ್ಪಂದಿಸುವವರು ಯಾರು, ಎಲ್ಲಾ ಸಮಸ್ಯೆಗಳನ್ನು ಪತ್ರಿಕೆಯಲ್ಲಿ ಪ್ರಕಟಿಸುವ ಬರೆಯುವಂತ ಪತ್ರಕರ್ತರ ಸಮಸ್ಯೆಗಳು ಹಾಗೂ ಸೌಲಭ್ಯಗಳು ಕೊಡುವಂತವರು ಯಾರು ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು, ಈ ಸಂದರ್ಭದಲ್ಲಿ ಪತ್ರಿಕಾ ಕಾನೂನು ಸಲಹೆಗಾರರಾದ ಆರ್ ಟಿ ಸ್ವಾಮಿ ವಕೀಲರು ದೊಡ್ಡೇರಿ, ಭೀಮನಕೆರೆ ಶಿವಮೂರ್ತಿ,, ಬಿಎಸ್ಪಿ ಜಿಲ್ಲಾ ಅಧ್ಯಕ್ಷ ಎನ್ ಪ್ರಕಾಶ್, CEO ದೇವೇಂದ್ರಪ್ಪ, ಮುಖ್ಯ ಶಿಕ್ಷಕರಾದ ಶ್ರೀನಿವಾಸ್, ಹಿರೇಹಳ್ಳಿ ರಾಜಣ್ಣ, ಡಿ ತಿಪ್ಪೇಸ್ವಾಮಿ, ಡಿಲಿಂಗಪ್ಪ ಟಿ ತಿಪ್ಪೇಸ್ವಾಮಿ ಕೆ ಟಿ ರಾಜಣ್ಣ, ಆರ್, ಟಿ ತಿಪ್ಪೇಸ್ವಾಮಿ ರೇವಣಸಿದ್ದಪ್ಪ, ಪಿ ಎಚ್ ಧನಂಜಯ ಇತರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

About The Author

Namma Challakere Local News
error: Content is protected !!