ಚಳ್ಳಕೆರೆ: ಶೀಲ ಶಂಕಿಸಿ ಪತ್ನಿ ಕೊಲೆಗೈದಿದ್ದವನಿಗೆ
ಜೀವಾವಧಿ ಶಿಕ್ಷೆ
ಚಿತ್ರದುರ್ಗ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ
ನ್ಯಾಯಾಧೀಶರಾದ ರೋಣ್ ವಾಸುದೇವ ಅವರು, ಪತ್ನಿಯ ಶೀಲ
ಶಂಕಿಸಿ ಆಕೆಯನ್ನು ಮಚ್ಚಿನಿಂದ ಹೊಡೆದು ಕೊಲೆಗೈದಿದ್ದ ಆರೋಪಿ
ದ್ಯಾಮಣ್ಣನಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಚಳ್ಳಕೆರೆ
ಸೋಮಗುದ್ದಿನ ದ್ಯಾಮಣ್ಣ ಮತ್ತು ನೇತ್ರಾವತಿ 12 ವರ್ಷಗಳ
ಹಿಂದೆ ವಿವಾಹವಾಗಿದ್ದರು. 2022ರಲ್ಲಿ ದ್ಯಾಮಣ್ಣ ಪತ್ನಿ ನೇತ್ರಾವತಿ
ಶೀಲವನ್ನು ಶಂಕಿಸಿ ಈ ಕೃತ್ಯ ಎಸಗಿದ್ದನು. ವಾದ-ಪ್ರತಿವಾದ ಆಲಿಸಿದ
ನಂತರ ನ್ಯಾಯಾಲಯವು ಈ ತೀರ್ಪು ಪ್ರಕಟಿಸಿದೆ.

About The Author

Namma Challakere Local News
error: Content is protected !!