ಚಳ್ಳಕೆರೆ :
ಚಿತ್ರದುರ್ಗ: ಅಧಿಕಾರಿಗಳಿಗೆ ಏಕ ವಚನದಲ್ಲಿ
ಮಾತಾಡಬೇಡಿ
ಅಧಿಕಾರಿಗಳಿಗೆ ಏಕ ವಚನದಲ್ಲಿ ಮಾತಾಡಬೇಡಿ, ನಮಗೂ
ನಮ್ಮದೆ ಆದ ಗೌರವವಿರುತ್ತದೆ ಎಂದು ನಗರಸಭೆ ಅಧಿಕಾರಿ
ರೇಣುಕಾ ನಗರಸಭೆ ಸದಸ್ಯ ಜೈನುಲಾಬ್ಲಿನ್ ಅವರಿಗೆ ಮನವಿ
ಮಾಡಿದರು.
ಚಿತ್ರದುರ್ಗ ನಗರಸಭೆ ಕೌನ್ಸಿಲ್ ಸಭಾಂಗಣದಲ್ಲಿಂದು
ನಡೆದ ಸಮಾನ್ಯ ಸಭೆಯಲ್ಲಿ ಮಾತಾಡಿ, ನೀವೆನಾದರೂ
ಕೇಳುವುದಿದ್ದರೆ ನೇರವಾಗಿ ಅಧ್ಯಕ್ಷರಿಗೆ ಕೇಳಿ, ಅವರು ನಮಗೆ
ಕೇಳುತ್ತಾರೆ. ಅದು ಬಿಟ್ಟು ನೀವು ಹೇಗಂದರೆ ಹಾಗೆ ಮಾತನಾಡಿ,
ಬೈಯುವುದು, ಸರಿಯಲ್ಲ. ಪ್ರತೀ ಸಭೆಯಲ್ಲೂ ನಾವು ನಿಮ್ಮಿಂದ
ಬೈಸಿಕೊಳ್ಳುವುದೇ ಆಗಿದೆ ಎಂದರು.

