ಚಳ್ಳಕೆರೆ :
ಹಿರಿಯೂರು ತಾಲೂಕಿನ ಧರ್ಮಪುರ ಹಾಲು ಉತ್ಪಾದಕರ ಸಹಕಾರ ಸಂಘ. ಧರ್ಮಪುರದ ಅರಳಿಕೆರೆಯಲಿ ಈ ದಿನ ಮಿಶ್ರ ತಳಿ ಹಸು ಕರುಗಳ ಪ್ರದರ್ಶನ ಮತ್ತು ಬರಡು ರಾಸುಗಳ ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿತ್ತು .
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶಿಮುಲ್ ಶಿವಮೊಗ್ಗ ಜಿಲ್ಲಾ ನಿರ್ದೇಶಕರಾದ b. c .ಸಂಜೀವ್ ಮೂರ್ತಿ ಮತ್ತು ಬಿ. ಆರ್. ರವಿಕುಮಾರ್ ರವರು ಭಾಗವಹಿಸಿದ್ದರು.
ಈ ಒಂದು ಶಿಬಿರವನ್ನು ಉದ್ದೇಶಿಸಿ ನಿರ್ದೇಶಕ ಬಿ. ಸಿ ಸಂಜೀವ್ ಮೂರ್ತಿರವರು ಮಾತನಾಡಿ ಧರ್ಮಪುರ ಹಾಲಿನ ಸಹಕಾರ ಸಂಘ 1990 ರಲ್ಲಿ ಪ್ರಾರಂಭವಾದಾಗಿನಿಂದ ಸಂಗವು ಬಹಳ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಪ್ರತಿ ವರ್ಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಒಳ್ಳೆಯ ಪ್ರಶಂಸೆಗೆ ಕಾರಣವಾಗಿದೆ. ಹಾಗೂ ಒಕ್ಕೂಟದಿಂದ ರಾಸುಗಳಿಗೆ ನೀಡುತ್ತಿರುವ ಔಷಧಿಗಳು ಬಹಳ ಗುಣಮಟ್ಟವು ಹೊಂದಿರುತ್ತದೆ ಇವತ್ತು ಕಾರ್ಯಕ್ರಮ ಬಹಳ ಸಂತೋಷದ ವಿಷಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಇನ್ನೋರ್ವ ನಿರ್ದೇಶಕ ಬಿ.ಆರ್ ರವಿಕುಮಾರ್ ರವರು ಮಾತನಾಡಿದರು ಮತ್ತು ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರು ಹಾಗೂ ವಿಸ್ತರಣಾಧಿಕಾರಿ ಕೃಷ್ಣಪ್ಪ ಮತ್ತು ಪಶು ವೈದ್ಯರುಗಳು ಕಾರ್ಯಕ್ರಮಕ್ಕೆ ಭಾಗವಹಿಸಿ ಯಶಸ್ವಿ ಯಾಗಿ ನಡೆಯಿತು ಇಲ್ಲಿನ ಗ್ರಾಮಸ್ಥರು ಹಾಗೂ ಉಪಸ್ಥಿತರಿದ್ದರು

