ಗೌಡಗೆರೆ ಗ್ರಾ.ಪಂ. ನೂತನ ಅಧ್ಯಕ್ಷೆ ಶ್ರೀಮತಿ ಶಾಂತಮ್ಮ ಮತ್ತು ಉಪಾಧ್ಯಕ್ಷ ಎಂ ಎಚ್ ಲಕ್ಷ್ಮಣ್ ಅವಿರೋಧವಾಗಿ ಆಯ್ಕೆ
. ಚುನಾವಣಾಧಿಕಾರಿ
ಕೆ. ಎಸ್. ಸುರೇಶ್ ಘೋಷಣೆ.

ನಾಯಕನಹಟ್ಟಿ. ಹೋಬಳಿಯ ಗೌಡಗೆರೆ ಗ್ರಾಮ ಪಂಚಾಯಿತಿಗೆ ಬುಧವಾರ ನಡೆದ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ನೂತನ ಅಧ್ಯಕ್ಷೆಯಾಗಿ ಶಾಂತಮ್ಮ ಮತ್ತು ಉಪಾಧ್ಯಕ್ಷ ಎಂ.ಎಚ್. ಲಕ್ಷ್ಮಣ್ ಅವಿರೋಧವಾಗಿ ಆಯ್ಕೆಯಾದರು.

ಒಟ್ಟು 16ಸದಸ್ಯರ ಬಲವುಳ್ಳ ಈ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳಾ ವರ್ಗಕ್ಕೆ ಮೀಸಲಿತ್ತು. ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ವರ್ಗಕ್ಕೆ ಮೀಸಲಾಗಿತ್ತು.
ಹಿಂದಿನ ಅಧ್ಯಕ್ಷೆ ರೇವಮ್ಮ ಡಿ.ಕೆ. ಬಸವರಾಜ್ ಮತ್ತು ಉಪಾಧ್ಯಕ್ಷೆ ಅನ್ನಪೂರ್ಣೇಶ್ವರಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು.

ಅಧ್ಯಕ್ಷ ಸ್ಥಾನಕ್ಕೆ ಶ್ರೀಮತಿ ಶಾಂತಮ್ಮ ಒಬ್ಬರೇ ನಾಮ ಪತ್ರ ಸಲ್ಲಿಸಿದ ಕಾರಣದಿಂದ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಎಂ ಎಚ್ ಲಕ್ಷ್ಮಣ್ ಒಬ್ಬರೇ ನಾಮಪತ್ರ ಸಲ್ಲಿಸಿದ ಕಾರಣದಿಂದ ಅವಿರೋಧವಾಗಿ ಆಯ್ಕೆ ಮಾಡಿ ಘೋಷಣೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಕೆ.ಎಸ್. ಸುರೇಶ್ ತಿಳಿಸಿದರು.

ಇನ್ನೂ ಚುನಾವಣಾ ಪ್ರಕ್ರಿಯೆಯಲ್ಲಿ 16 ಜನ ಸದಸ್ಯರು ಹಾಜರಿದ್ದರು.

ಇದೇ ಸಂದರ್ಭದಲ್ಲಿ ಮುಖಂಡರಾದ ಮಲ್ಲೂರಹಟ್ಟಿ ಗೌಡ್ರು ತಿಪ್ಪೇಸ್ವಾಮಿ, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಕೆ.ಒ. ತಿಪ್ಪೇಸ್ವಾಮಿ, ಹುರುಳಿ ತಿಪ್ಪೇಸ್ವಾಮಿ ಜೋಗಿಹಟ್ಟಿ, ಬಗರ್ ಹುಕುಂ ಕಮಿಟಿ ಸದಸ್ಯ ಪಿ.ಜಿ. ಬೋರನಾಯಕ, ಸಿ ರಂಗನಾಥ್ ಗೌಡಗೆರೆ, ಎಚ್ ಬಿ ತಿಪ್ಪೇಸ್ವಾಮಿ ಜೋಗಿಹಟ್ಟಿ, ಮಲ್ಲೂರಹಟ್ಟಿ ಬೋರಣ್ಣ, ಭೀಮಗೊಂಡನಹಳ್ಳಿ ರಂಗಸ್ವಾಮಿ, ಡಿ.ಬಿ. ಬೋಸಯ್ಯ ಚನ್ನಬಸಯ್ಯನಹಟ್ಟಿ, ಹೊಸ ಜೋಗಿಹಟ್ಟಿ ಎರ್ರಿಸ್ವಾಮಿ, ಚುನಾವಣಾಧಿಕಾರಿಯಾಗಿ ಕೆ.ಎಸ್ ಸುರೇಶ್, ಹಾಗೂ ಸಹಾಯಕರಾಗಿ ಶಶಿಧರ್ ಕರ್ತವ್ಯ ನಿರ್ವಹಿಸಿದರು. ಸದಸ್ಯರಾದ. ಟಿ ರಂಗಪ್ಪ, ತಿಪ್ಪೇಶ್ ಗಿಣಿಯರ್, ಅನ್ನಪೂರ್ಣೇಶ್ವರಿ, ರೇವಮ್ಮ, ಮಂಜಕ್ಕ, , ಮಂಜಮ್ಮ, ವೆಂಕಟೇಶ್ ದಳಪತಿ, ನಾಗಣ್ಣ, ಸಣ್ಣಪ್ಪ, ಸರೋಜಮ್ಮ, ರಾಧಮ್ಮ ಬೋರಣ್ಣ, ಕೆಂಗ ರುದ್ರಪ್ಪ, ಜಿ.ಎಚ್. ಮಂಜುಳಾ, ಜಿ.ಓ. ಓಬಳೇಶ್, ಪಿಡಿಒ ಎಚ್. ಹೇಮಾವತಿ ಕಾರ್ಯದರ್ಶಿ ಗಿರೀಶ್, ಗಣಕಯಂತ್ರ ನಿರ್ವಾಹಕ ಗುರುಸ್ವಾಮಿ, ಹಾಗೂ ಸಿಬ್ಬಂದಿ ವರ್ಗ ಮತ್ತು ಜಿ.ಟಿ ತಿಪ್ಪೇಸ್ವಾಮಿ ಗೌಡಗೆರೆ, ಎಸ್ ವೆಂಕಟೇಶ್, ಕೆ.ಜಿ. ಮಂಜುನಾಥ್, ಜೋಗಿಹಟ್ಟಿ ನಾಯಕನಹಟ್ಟಿ ಪೊಲೀಸ್ ಠಾಣೆಯ ಪಿಎಸ್ಐ ದೇವರಾಜ್, ಹಾಗೂ ಸಿಬ್ಬಂದಿಗಳಾದ ಹಾಲೇಶ್, ಗುರುದತ್ತ, ಅಣ್ಣಪ್ಪ ನಾಯ್ಕ, ತಿಪ್ಪೇಸ್ವಾಮಿ, ಅಶ್ವಥ್, ಸೇರಿದಂತೆ ಗೌಡಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಹಳ್ಳಿಗಳ ಗ್ರಾಮಸ್ಥರು ಹಾಗೂ ಸಮಸ್ತ ಊರಿನ ಗ್ರಾಮಸ್ಥರು ಇದ್ದರು

About The Author

Namma Challakere Local News
error: Content is protected !!