ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಮತ್ತು ಸಾರ್ವಜನಿಕ ಉದ್ಯಮಗಳ ಸಮಿತಿಯ ಅಧ್ಯಕ್ಷರಾದ ಟಿ ರಘುಮೂರ್ತಿ ರವರು ಬೆಂಗಳೂರು ನಗರದ ವಿಕಾಸಸೌಧದ ಮೂರನೇ ಮಹಡಿಯ ಕೊಠಡಿ ಸಂಖ್ಯೆ 317ರಲ್ಲಿ ನಡೆದ 2025-2 6 ನೇ ಸಾಲಿನ ಕರ್ನಾಟಕ ವಿಧಾನಮಂಡಲ ಸಾರ್ವಜನಿಕ ಉದ್ಯಮಗಳ ಸಮಿತಿಯ ಪ್ರಾರಂಭಿಕ ಸಭೆಯಲ್ಲಿ ಪಾಲ್ಗೊಂಡು ಉದ್ಯಮಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಗಳಾದ ಡಾ. ವಿಶಾಲ ಐ.ಎ.ಎಸ್. , ಶಾಸಕರು ಹಾಗೂ ಸದಸ್ಯರಾದ ಶಾಂತನಗೌಡ, ವಿಧಾನಪರಿಷತ್ ಸದಸ್ಯರು ಹಾಗೂ ಸಮಿತಿ ಸದಸ್ಯರಾದ ಗೋವಿಂದರಾಜು, ಮತ್ತು ಇತರ ಎಫ್.ಡಿ. ಅಧಿಕಾರಿಗಳು, ವಿಧಾನ ಸಭೆ ಹಾಗೂ ವಿಧಾನ ಪರಿಷತ್ ಸದಸ್ಯರು ಸಮಿತಿ ಸದಸ್ಯರುಗಳು, ಅಧ್ಯಕ್ಷರ ಆಪ್ತ ಸಹಾಯಕ ಸೈಯದ್ ಇಸಾಕ್, ಉಪಸ್ಥಿತರಿದ್ದರು.

