“ತಾಳ್ಮೆಯ ಮೂರ್ತರೂಪವೇ ಶ್ರೀಮಾತೆ ಶಾರದಾದೇವಿ”:- ಶ್ರೀಮತಿ ಜಿ ಯಶೋಧಾ ಪ್ರಕಾಶ್ ಅಭಿಪ್ರಾಯ. ಚಳ್ಳಕೆರೆ:-ಶ್ರೀಮಾತೆ ಶಾರದಾದೇವಿಯವರು ತಾಳ್ಮೆಯ ಮೂರ್ತಿ ರೂಪವೇ ಆಗಿದ್ದರು ಎಂದು ಚಳ್ಳಕೆರೆಯ ಶಿವನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಜಿ ಯಶೋಧಾ ಪ್ರಕಾಶ್ ತಿಳಿಸಿದರು. ಶಿವನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಮಾಡುತ್ತ ಮಾತನಾಡುತ್ತಿದ್ದರು. ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀದೇವಿಸ್ತುತಿ ಪಠಣ ಮತ್ತು ವಿಶೇಷ ಭಜನಾ ಕಾರ್ಯಕ್ರಮ ನಡೆಯಿತು. ಸತ್ಸಂಗದಲ್ಲಿ ಸದ್ಭಕ್ತರಾದ ಶ್ರೀಮತಿ ಎಂ ಗೀತಾ ನಾಗರಾಜ್,ಅನಿತಾರೆಡ್ಡಿ, ಯತೀಶ್ ಎಂ ಸಿದ್ದಾಪುರ, ಭಾಗ್ಯಲಕ್ಷ್ಮೀ, ವಿಜಯಲಕ್ಷ್ಮೀ, ರಶ್ಮಿ ರಮೇಶ್, ಶೈಲಜಾ, ಕೃಷ್ಣವೇಣಿ, ಜಯಶೀಲಮ್ಮ, ಜಯಮ್ಮ, ಲೀಲಾವತಿ, ನಾಗರತ್ನಮ್ಮ, ವೀರಮ್ಮ,ಸರಸ್ವತಿ, ರಶ್ಮಿ ವಸಂತ,ಸುಧಾಮಣಿ, ದ್ರಾಕ್ಷಾಯಣಿ, ಭಾಗವಹಿಸಿದ್ದರು.

