ಚಳ್ಳಕೆರೆ :
ಚಿತ್ರದುರ್ಗ: ಸಿಎಂ ಡಿಸಿಎಂ ರಾಜೀನಾಮೆ ನೀಡಬೇಕಿತ್ತು
ರಾಜ್ಯ ಸರ್ಕಾರ ತನ್ನ ಪ್ರತಿಷ್ಠೆಗಾಗಿ 11 ಜನರ ಬಲಿಯನ್ನು
ತೆಗೆದುಕೊಂಡಿದೆ.
ಆರ್ ಸಿಬಿ ಸಂಭ್ರಮಾಚಣೆ ಸರ್ಕಾರ ಮಾಡದೆ
ಒಂದು ಶುಭಾಶಯ ಕೋರಬಹುದಿತ್ತೆಂದು ವಿಧಾನ ಪರಿಷತ್
ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ
ಹೇಳಿದರು.
ಚಿತ್ರದುರ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿ,
35ಸಾವಿರ ಸಾಮರ್ಥ್ಯವಿರೋ ಕಡೆ ಅವ್ಯವಸ್ಥೆಯಾಗಿ, ನೂಕು
ನುಗ್ಗಲಿಂದ ಕಾಲ್ತುಳಿವಾಗಿದೆ. ಸರ್ಕಾರದ ಅಚಾತುರ್ಯ, ಸಿಎಂ
ಡಿಸಿಎಂಗೆ ಮಾನವೀಯತೆ ಇದ್ದಿದ್ದರೆ, ಇಷ್ಟೊತ್ತಿಗಿಬ್ಬರು ರಾಜೀನಾಮೆ
ಕೊಡಬೇಕಿತ್ತೆಂದರು.

