ಚಳ್ಳಕೆರೆ :
ಚಿತ್ರದುರ್ಗ: ಪೌರ ಕಾರ್ಮಿಕರ ಮೇಲೆ ಹಲ್ಲೆ ಖಂಡಿಸಿ
ಪ್ರತಿಭಟನೆ
ಹಾವೇರಿಯಲ್ಲಿ ಬ್ಯಾನರ್ ಗಳನ್ನು ತೆರವು ಗೊಳಿಸುತ್ತಿದ್ದ
ಪೌರಕಾರ್ಮಿಕರ ಮೇಲೆ ಹಲ್ಲೆ ನಡೆಸಿರುವವರ ವಿರುದ್ಧ ಕಾನೂನು
ರೀತಿ ಕ್ರಮ ಕೈಗೊಳ್ಳುವಂತೆ ಪೌರ ಕಾರ್ಮಿಕರ ಸಂಘದ ಜಿಲ್ಲಾ
ಘಟಕ ಚಿತ್ರದುರ್ಗದಲ್ಲಿ ಆಗ್ರಹಿಸಿದೆ.
ಡಿಸಿ ಕಚೇರಿ ಆವರಣದಲ್ಲಿಂದು
ಪ್ರತಿಭಟನೆ ನಡೆಸಿ ಅನಧಿಕೃತವಾಗಿ ಕಟ್ಟಲಾಗಿದ್ದ ಬ್ಯಾನರ್ ಗಳನ್ನು
ತೆರವುಗೊಳಿಸಿದ್ದಾರೆ ಎಂಬ ಕಾರಣಕ್ಕೆ ಪೌರಕಾರ್ಮಿಕ ರಾಜು ಎಲ್ಲಪ್ಪ
ದೊಡ್ಡಮನಿ, ಮೇಲೆ ಹಲ್ಲೆ ನಡೆಸಲಾಗಿದೆ ಇವರಿಗೆ ನ್ಯಾಯಾಲಯ
ಜಾಮೀನು ನೀಡಬಾರದು ಎಂದು ಒತ್ತಾಯಿಸಿದರು.

