ತಳಕು ಸರಣಿ ಕಳ್ಳತನ ಆರೋಪಿಯ ಬಂಧನ.
ಕಳೆದ ವಾರ ನಡೆದ ತಳಕು ಸರಣಿ ಅಂಗಡಿ ಕಳ್ಳತನ ಆರೋಪಿಯನ್ನು ತಳಕು ಪೋಲೀಸರು ಬಂಧಿಸಿದ್ದಾರೆ .
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರಂಜಿತ್ ಕುಮಾರ್ ಭಂಡಾರ ರವರ ಆದೇಶದಂತೆ ಡಿವೈಎಸ್ಪಿ ಸತ್ಯನಾರಾಯಣ ರಾವ್ ಮತ್ತು ಸಿಪಿಐ ಹನುಮಂತಪ್ಪ ಎಂ.ಶಿರೇಹಳ್ಳಿ ರವರ ಮಾರ್ಗದರ್ಶನದಲ್ಲಿ ತಳಕು ಠಾಣಾ ಪಿ.ಎಸ್.ಐ ಮತ್ತು ಸಿಬ್ಬಂದಿಗಳು ಪಂಡ್ರಾಹಳ್ಳಿ ಬಾಲರಾಜು ಎಂಬ ವ್ಯಕ್ತಿಯನ್ನು ದಸ್ತಗಿರಿ ಮಾಡಿ 13,000 ರೂ ನಗದು ಹಣ ಮತ್ತು 50 ಪ್ಯಾಕ್ ವಿಮಲ್, ಗುಟ್ಕಾ ಗಳನ್ನು ಹಾಗೂ ಕಳ್ಳತನ ಮಾಡಲು ಬಳಸಿದ ಆಯುಧಗಳನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

