ನಾಯಕನಹಟ್ಟ: ಚಿತ್ರದುರ್ಗ ಜಿಲ್ಲಾ ಪೊಲೀಸ್, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಾಯಕನಹಟ್ಟಿ ಪೊಲೀಸ್ ಠಾಣೆ ವತಿಯಿಂದ ಜಿಲ್ಲೆಯಾದ್ಯಂತ ನಡೆಯುವ ಕಾನೂನು ಜಾಗೃತಿ ಜಾತ್ರೆಯ ಯಾತ್ರೆಯ ಸಮಾರಂಭ ಮತ್ತು ಪ್ರದರ್ಶನ ಕಾರ್ಯಕ್ರಮವನ್ನು ನಾಯಕನಹಟ್ಟಿ ಒಳಮಠದ ಸಮುದಾಯ ಭವನದಲ್ಲಿ ಮಂಗಳವಾರ ಸಂಜೆ ಸಮಯದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಆಯೋಗದ ಸದಸ್ಯ ಕೆ ಟಿ ತಿಪ್ಪೇಸ್ವಾಮಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.ಕಾನೂನು ಜಾಗೃತಿ ಜಾತ್ರೆಯಲ್ಲಿ ರಂಗಭೂಮಿಯ ಮಂತ್ರಿಕತೆಯನ್ನ ಅನುಭವಿಸಿ ಆಧುನಿಕ ನಾಟಕ,ಸಂಸ್ಕೃತಿ,ಅಪರಾದ,, ರಸ್ತೆ ಸುರಕ್ಷತೆ, ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ,ಕಾನೂನು ಮತ್ತು ಸುವ್ಯೆವಸ್ಧೆಯ ಬಗ್ಗೆ ನಾಟಕ ರೂಪದಲ್ಲಿ ಅದ್ಭುತವಾಗಿ ಪ್ರದರ್ಶನಗೊಂಡಿತು.

Jan 15, 2026

ನಾಯಕನಹಟ್ಟ: ಚಿತ್ರದುರ್ಗ ಜಿಲ್ಲಾ ಪೊಲೀಸ್, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಾಯಕನಹಟ್ಟಿ ಪೊಲೀಸ್ ಠಾಣೆ ವತಿಯಿಂದ ಜಿಲ್ಲೆಯಾದ್ಯಂತ ನಡೆಯುವ ಕಾನೂನು ಜಾಗೃತಿ ಜಾತ್ರೆಯ ಯಾತ್ರೆಯ ಸಮಾರಂಭ ಮತ್ತು ಪ್ರದರ್ಶನ ಕಾರ್ಯಕ್ರಮವನ್ನು ನಾಯಕನಹಟ್ಟಿ ಒಳಮಠದ ಸಮುದಾಯ ಭವನದಲ್ಲಿ ಮಂಗಳವಾರ ಸಂಜೆ ಸಮಯದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಆಯೋಗದ ಸದಸ್ಯ ಕೆ ಟಿ ತಿಪ್ಪೇಸ್ವಾಮಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಕಾನೂನು ಜಾಗೃತಿ ಜಾತ್ರೆಯಲ್ಲಿ ರಂಗಭೂಮಿಯ ಮಂತ್ರಿಕತೆಯನ್ನ ಅನುಭವಿಸಿ ಆಧುನಿಕ ನಾಟಕ,ಸಂಸ್ಕೃತಿ,ಅಪರಾದ,, ರಸ್ತೆ ಸುರಕ್ಷತೆ, ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ,ಕಾನೂನು ಮತ್ತು ಸುವ್ಯೆವಸ್ಧೆಯ ಬಗ್ಗೆ ನಾಟಕ ರೂಪದಲ್ಲಿ ಅದ್ಭುತವಾಗಿ ಪ್ರದರ್ಶನಗೊಂಡಿತು.

ಅಪ್ರಾಪ್ತ ಬಾಲಕಿಯರನ್ನು ಹಾಗೂ ಮಹಿಳೆಯರನ್ನು ಮುಟ್ಟು ಎಂಬ ಸಂಪ್ರದಾಯದಿಂದ ಊರೂ ಹೊರಗಡೆ ಇಡುವುದು,ಅಪ್ರಾಪ್ತ ವಯಸ್ಸಿನವರಿಗೆ ಬಾಲ್ಯ ವಿವಾಹ ಮಾಡುವುದು. ಜಿತಾಕೀಡುವುದು, ಕೂಲಿ ಕೆಲಸದಲ್ಲಿ ತೊಡಗಿಷಿಕೊಳ್ಳುವುದು ಸರ್ಕಾರಿ ಅಥವಾ ಖಾಸಗಿ ಕಛೇರಿ ಗಳಲ್ಲಿ ಮಹಿಳೆಯರ ಮೇಲೆ ಲೈಯಿಂಗಿಕ ಕಿರುಕುಳ ನೀಡುವುದು, ಗಾಂಜಾ ಸೇವನೆ ಮಾಡುವುದು, ಗಾಂಜಾ ಬೆಳೆಯುವುದು, ಸೈಬರ್ ವಂಚಕರಿಂದ ಮೋಸ, ನಶೆ ಮುಕ್ತ ಕರ್ನಾಟಕದತ್ತ ದಿವ್ಯ ಹೆಜ್ಜೆ, ವೃದ್ಧ ತಂದೆ ತಾಯಿ ಯಾರನ್ನ ಮನೆಯಿಂದ ಹೊರಹಾಕಿದರೆ ಕಾನೂನು ರೀತಿಯ ಶಿಕ್ಷೆ ಯ ಬಗ್ಗೆ ನಾಟಕ ಯಶಸ್ವಿಯಾಗಿ ಪ್ರದರ್ಶನಗೊಂಡಿತು.

ಈ ಸಂದರ್ಭದಲ್ಲಿ ಪಟ್ಟಣದ ಮುಖಂಡರಾದ ಪ್ರಭುಸ್ವಾಮಿ, ಎಂ ವೈ ಟಿ ಸ್ವಾಮಿ, ಲೋಕೇಶ್ ಆಚಾರ್, ಎಸ್.ಟಿ. ಬೋರಸ್ವಾಮಿ, ನಲಗೇತನಹಟ್ಟಿ ಪಿ.ಎನ್. ಮುತ್ತಯ್ಯ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಶ್ರೀಕಾಂತ್, ಡಿವೈಎಸ್ಪಿ ಸತ್ಯನಾರಾಯಣ್ ರಾವ್, ತಳಕು ವೃತ್ತ ನಿರೀಕ್ಷಕ ಹನುಮಂತಪ್ಪ ಎಂ ಶಿರೇಹಳ್ಳಿ, ನಾಯಕನಹಟ್ಟಿ ಉಪನಿರೀಕ್ಷಕ ಜಿ ಪಾಂಡುರಂಗಪ್ಪ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಶ್ರೀಕಾಂತ್, ಬೆಸ್ಕಾಂ ಶಾಖಾಧಿಕಾರಿ ಎನ್ ಬಿ ಬೋರಣ್ಣ, ಕೆಇಬಿ ಸಿಬ್ಬಂದಿ ವರ್ಗದವರು, ಕನ್ನಡ ಪರ ಸಂಘಟನೆಗಳ ಸದಸ್ಯರುಗಳು, ರೈತ ಸಂಘಟನೆ ಪದಾಧಿಕಾರಿಗಳು, ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರುಗಳು, ಸಂಜೀವಿನಿ ಜೀವ ರಕ್ಷಕ ಸಂಸ್ಥೆಯ ಸದಸ್ಯರುಗಳು ಹಾಗೂ ಹೋಬಳಿಯ ವಿವಿಧ ಶಾಲೆಯ ಶಿಕ್ಷಕರು, ಶಿಕ್ಷಕಿಯರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಸುತ್ತಮುತ್ತಲ ಗ್ರಾಮಗಳ ಮುಖಂಡರುಗಳು ಇದ್ದರು.

About The Author

Namma Challakere Local News
error: Content is protected !!