ಪ್ರತಿಯೊಬ್ಬರೂ ಶ್ರೀ ಕೃಷ್ಣನ ತತ್ವ ಆದರ್ಶಗಳನ್ನು ಮೈಗೂಡಿಸಿಕೊಳ್ಳಿ ಶ್ರೀಮತಿ ಉಮಾ ಬೋರಸ್ವಾಮಿ.
ನಾಯಕನಹಟ್ಟಿ: ಪ್ರತಿಯೊಬ್ಬರ ಮನೆ ಮಗುವೇ ಆಗಿರುವನು ಶ್ರೀ ಕೃಷ್ಣ ಇಂದು 5252 ಜನುಮ ದಿನ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗಿದೆ ಎಂದು ಬಿಎಸ್ ಹೈಟೆಕ್ ಇಂಗ್ಲಿಷ್ ಮೀಡಿಯಂ ಸ್ಕೂಲಿನ ಕಾರ್ಯದರ್ಶಿ ಶ್ರೀಮತಿ ಉಮಾ ಬೋರಸ್ವಾಮಿ ಹೇಳಿದರು.
ಶನಿವಾರ ಪಟ್ಟಣದ ಬಿ. ಎಸ್. ಹೈ – ಟೆಕ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಪ್ರಯುಕ್ತ ಶ್ರೀ ಕೃಷ್ಣನ ಭಾವಚಿತ್ರಕ್ಕೆ ವಿಶೇಷ ಪೂಜೆ ನೆರವೇರಿಸಿ ಮಾತನಾಡಿದ ಅವರು ಬದುಕಿನ ಪ್ರತಿ ಹಂತದಲ್ಲೂ ಮಾರ್ಗದರ್ಶಕನಾಗಿ, ಉಲ್ಲಾಸದ ಖಾನಿಯಾಗಿ
ಜೀವಂತಿಕೆಯ ಗಣಿಯಾಗಿ ಕೈಹಿಡಿದು ಮುನ್ನಡೆಸುವ ಶಕ್ತಿವಂತ ಶ್ರೀ ಕೃಷ್ಣನ ಲೀಲಾ ವಿಲಾಸಗಳನ್ನು, ಭಜನೆ, ಕೀರ್ತನೆಯ ಮತ್ತು ಮೊಸರು ಮಡಿಕೆ ಹೊಡೆವ
ಕಾರ್ಯಕ್ರಮಗಳೊಂದಿಗೆ ಸಂಭ್ರಮಿಸಲಾಗುತ್ತದೆ
ಈ ಹಬ್ಬವು ಧರ್ಮ, ಸತ್ಯ ಮತ್ತು ನ್ಯಾಯದ ಜಯವನ್ನು ಪ್ರತಿ ಪಾದಿಸುತ್ತದೆ. ಮಕ್ಕಳನ್ನು ಶ್ರೀ ಕೃಷ್ಣನಂತೆ ಸಿಂಗರಿಸುವುದು ಮಕ್ಕಳಲ್ಲಿ ಶ್ರೀ ಕೃಷ್ಣನ್ನು ಕಾಣುವು ಹಾಗೂ ಹರೇ ಕೃಷ್ಣ ಹರೇ ಕೃಷ್ಣ- ಕೃಷ್ಣ ಕೃಷ್ಣ ಹರೇ ಹರೇ ಎಂಬ ನಾಮವನ್ನು ಪುಟಾಣಿ ಮಕ್ಕಳಿಗೂ ಹಾಗೂ ಈ ಕಾರ್ಯಕ್ರಮ ದಲ್ಲಿ ಭಾಗವಹಿಸಿದ ಪೋಷಕರಿಗೂ ಶಾಲೆಯ ಕಾರ್ಯದರ್ಶಿಗಳಾದ ಶ್ರೀ ಮತಿ ಉಮಾ ಬೋರಸ್ವಾಮಿಯವರು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಆಡಳಿತ ಆಧಿಕಾರಿಗಳಾದ ಶ್ರೀ ಮತಿ ಬಾನುಪ್ರಿಯಾ, ಮಖ್ಯೋಪಾದ್ಯಾಯರಾದ ಶ್ರೀಪಾಲಯ್ಯ ಹಾಗೂ
ಶ್ರೀ ರಂಗಸ್ವಾಮಿ ಶಿಕ್ಷಕರದ ಆಶಾ, ಮಂಗಳ, ಆಫ್ರಿನ್ ತಾಜ್, ವಿಜಯಕುಮಾರಿ, ಬೋರಣ್ಣ, ಕೀರ್ತಿ,ಅಸ್ಮಾ, ಅರ್ಚನಾ, ಸುನಿಲ್ ಕುಮಾರ್, ವೆಂಕಟೇಶ್, ಅಂಜನಾ ಮೂರ್ತಿ ಕವಿತಾ ಹಾಗೂ ಕೃಷ್ಣ ಮೂರ್ತಿ ಉಪಸ್ಥಿತರಿದ್ದರು.

