ಚಿತ್ರದುರ್ಗ: ಡಿಸೆಂಬರ್ ಕ್ರಾಂತಿ ನಿಜವಾಗುತ್ತಿದೆ
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು
ಚಿತ್ರದುರ್ಗದಲ್ಲಿಂದು ಪತ್ರಿಕಾ ಗೋಷ್ಠಿ ನಡೆಸಿ, ರಾಜ್ಯದಲ್ಲಿ
ನವೆಂಬರ್-ಡಿಸೆಂಬರ್ ನಲ್ಲಿ ಕ್ರಾಂತಿಯಾಗಲಿದೆ ಎಂಬ ತಮ್ಮ
ಭವಿಷ್ಯ ನಿಜವಾಗುತ್ತಿದೆ ಎಂದು ಹೇಳಿದ್ದಾರೆ. ಆರ್.ಎಸ್.ಎಸ್.,
ಜಾತಿಗಣತಿ ಮತ್ತು ರಸ್ತೆ ಗುಂಡಿಗಳಂತಹ ವಿಷಯಗಳನ್ನು
ಮರೆಮಾಚಲು ಸರ್ಕಾರ ಕುತಂತ್ರ ಮಾಡುತ್ತಿದೆ. ಯತೀಂದ್ರ ಅವರು
ಇಂತಹ ಹುಳಗಳನ್ನು ಬಿಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಗೊಂದಲದ
ಗೂಡಾಗಿದ್ದು, ಸರ್ಕಾರ ಯಾವಾಗ ಪತನಗೊಳ್ಳುತ್ತದೆ ಎಂದು
ಹೇಳಲಾಗದು ಎಂದು ಅವರು ತಿಳಿಸಿದರು.

