ಚಳ್ಳಕೆರೆ : ಚಳ್ಳಕೆರೆ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಅಲ್ಲಲ್ಲಿ ಪೆಟ್ಟಿಗೆ ಅಂಗಡಿ ಮುಂಗಟ್ಟುಗಳಲ್ಲಿ
ಮದ್ಯದ ವ್ಯಾಪಾರ ಮಾಡುವುದಕ್ಕೆ ಕಡಿವಾಣ ಹಾಕಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಸದ ಪದಾಧಿಕಾರಿಗಳು ಅಬಕಾರಿ ಇಲಾಖೆಗೆ ಮನವಿ ಸಲ್ಲಿಸಿದರು‌

ಚಳ್ಳಕೆರೆ ತಾಲ್ಲೂಕಿನ ನಗರ ಹಾಗೂ ಗ್ರಾಮೀಣ
ಭಾಗಗಳಲ್ಲಿ ಪ್ರತಿ ಚಿಲ್ಲರೆ ಅಂಗಡಿ, ಗೂಡು ಅಂಗಡಿಗಳಲ್ಲಿ ಅನಧಿಕೃತವಾಗಿ ನಡೆಯುವ ಮದ್ಯದ
ವ್ಯಾಪಾರ ರಾಜ ರೋಷವಾಗಿ ಆಯಾ ಚಳ್ಳಕೆರೆ ನಗರದ ಬಾರ್‌ಗಳ (ಮದ್ಯದ ಬಾಕ್ಸ್‌ಗಳ)
ಮುಖಾಂತರ ಸರಬರಾಜು ಆಗುತ್ತಿದೆ. ಹಾಗೂ ಮನೆ ಮನೆಗೆ ನೀರು ಮತ್ತು ತಂಪು ಪಾನಿಯಗಳೂ
ಹೇಗೆ ಸರಬರಾಜು ಆಗುತ್ತಿದೆ ಹಾಗೇ ಮದ್ಯದ ಬಾಟಲ್‌ಗಳು ಸಹ ಬಾರ್ ಅಂಗಡಿಗಳಿಂದ
ಸರಬರಾಜು ಆಗುತ್ತಿದೆ.

ಇದಕ್ಕೆ ಮುಖ್ಯವಾಗಿ ಪಂಚಾಯಿತಿಯ ಯಾವುದೇ ಅಧಿಕಾರಿಗಳಾಗಳು ನೆಪ
ಮಾತ್ರಕ್ಕೆ ಕಾನೂನು ಲೆಕ್ಕದಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದು ಪ್ರಮಾಣೀಕವಾಗಿ ಗಮನಹರಿಸಿದರೆ ಈ ಮಟ್ಟದ
ವ್ಯಾಪಾರವನ್ನು ನಿಲ್ಲಿಸಬಹುದು, ಡಾಬಾ, ಹೋಟೆಲ್‌ಗಳಲ್ಲಿ ಕೂಡ ಮದ್ಯದ ಬಾಟಲ್ ಸರಬರಾಜು
ಆಗುತ್ತಿದೆ. ಇದರಿಂದ ಎಷ್ಟೋ ಯುವಕರು ಮತ್ತು ನಗರ ಮತ್ತು ಗ್ರಾಮಗಳಲ್ಲಿ ಕುಡಿತಕ್ಕೆ
ಬಲಿಯಾಗುತ್ತಿರುವುದನ್ನು ನಾವುಗಳು ತಾಲ್ಲೂಕಿನಲ್ಲಿ ಕಣ್ಣಾರೆ ನೋಡುತ್ತಿದ್ದೇವೆ.

ಇದಕ್ಕೆಲ್ಲಾ ಕಡಿವಾಣ
ಹಾಕಬೇಕೆಂದು ಕರ್ನಾಟಕ ರಕ್ಷಣಾ ವೇಧಿಕೆ (ಪ್ರವೀಣ ಶೆಟ್ಟಿ) ಬಣದಿಂದ ತಾಲ್ಲೂಕು ಅಧ್ಯಕ್ಷರಾದ ಪಿ
ಮಂಜುನಾಥ್, ಪ್ರಧಾನ ಕಾರ್ಯದರ್ಶಿಯಾದ ಚಂದ್ರಣ್ಣ, ಗೌರವಾಧ್ಯಕ್ಷರಾದ ಸಿ. ಬೋಜರಾಜ,
ಕಾರ್ಮಿಕಘಟಕ ಅದ್ಯಕ್ಷರಾದ ಮಂಜುನಾಥ, ಸಂಘಟನ ಕಾರ್ಯದರ್ಶಿ ಮುರುಳಿ, ಗಿರೀಶ್, ಹಾಗೂ
ಪದಾಧಿಕಾರಿಗಳ ಮೂಲಕ ತಮ್ಮಲ್ಲಿ ಅನಧಿಕೃತ ಮದ್ಯದ ಮಾರಾಟವನ್ನು ಕಡಿವಾಣ ಹಾಕಬೇಕೆಂದು
ಈ ಮೂಲಕ ತಮ್ಮಲ್ಲಿ ಮನವಿ ಮಾಡಲಾಗುವುದು.

ಇಲ್ಲದಿದ್ದಲ್ಲಿ ಉಗ್ರ ಹೋರಾಟವನ್ನು
ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇದೇ ಸಂಧರ್ಭದಲ್ಲಿ ತಾಲೂಕು ಅಧ್ಯಕ್ಷ ಮಂಜುನಾಥ್, ರಾಜು, ಇತರರು ಇದ್ದರು.

About The Author

Namma Challakere Local News
error: Content is protected !!