ಚಳ್ಳಕೆರೆ : ಸ್ವಚ್ಛ ನಗರ ಮನುಷ್ಯನ ಆರೋಗ್ಯಕರ ಜೀವನಕ್ಕೆ ನಾಂದಿ ಎಂಬಂತೆ ನಗರದ ತ್ಯಾಜ್ಯ ವಿಲೇವಾರಿ ಘಟಕಕ್ಕೆ ನಗರಸಭೆ ಅಧ್ಯಕ್ಷ ಆರ್. ಮಂಜುಳಾ ಪ್ರಸನ್ನ ಕುಮಾರ್ ಹಾಗೂ ಉಪಾಧ್ಯಕ್ಷ ಕವಿತಾ ಬೋರಯ್ಯ ಭೇಟಿ ನೀಡಿ ಘನ ತ್ಯಾಜ್ಯ ಸಂಗ್ರಹವನ್ನು ಪರೀಶಿಲಿಸಿದರು.
ನಗರದ ಬಳ್ಳಾರಿ ರಸ್ತೆಯಲ್ಲಿ ಇರುವ ಘನ ತಾಜ್ಯ ಸಂಗ್ರಹ ಘಟಕಕ್ಕೆ ಬೇಟಿನೀಡಿದ ಅಧ್ಯಕ್ಷರು, ಘಟಕದಲ್ಲಿ ಹಸಿ ಕಸ, ಒಣ ಕಸ ಬೇರ್ಪಡಿಸುವ ವಿಧಾನವನ್ನು ಪರಿಶೀಲಿಸಿದರು.
ಅದರಂತೆ ನಗರದಲ್ಲಿ ದಿನನಿತ್ಯ ಶೇಖರಣೆಯಾದಂತಹ ತ್ಯಾಜ್ಯವನ್ನು ವಿಂಗಡಿಸಿ ಬೇರ್ಪಡಿಸಿ, ಶೇಖರಿಸಿ ಮರುಬಳಕೆ ಹಾಗೂ ಕೊಳೆಯುವ ಹಾಗೂ ಕೊಳೆಯದೆ ಇರುವ ತ್ಯಾಜ್ಯ ವನ್ನು ಸಿಬ್ಬಂದಿಯಿಂದ ಮಾಹಿತಿ ಪಡೆದರು.
ಸಿಬ್ಬಂದಿಗೆ ಸೂಕ್ತ ರಕ್ಷಣೆ ಹಾಗೂ ಮಾಸ್ಕ ಹಾಕಿಕೊಂಡು ಕಾರ್ಯನಿರ್ವಹಿಸಬೇಕು ತ್ಯಾಜ್ಯ ವಿಂಗಡಿಸುವ ಸಂಧರ್ಭದಲ್ಲಿ ಮನುಷ್ಯ ನ ಆರೋಗ್ಯದ ಮೇಲೆ ನಿಗಾ ಇಡಬೇಕು ಎಂದು ಕಿವಿ ಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಪೌರಾಯುಕ್ತ ಜಗರೆಡ್ಡಿ , ಪರಿಸರ ಇಂಜಿನಿಯರ್ ನರೇಂದ್ರಬಾಬು, ಸಿಬ್ಬಂದಿ ವರ್ಗ ಮತ್ತಿತರರು ಹಾಜರಿದ್ದರು

