filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 47;

ಚಳ್ಳಕೆರೆ : ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಹೊಲಿಗೆ ಯಂತ್ರ ಉಪಯುಕ್ತವಾಗಿದೆ ಆದ್ದರಿಂದ ಮಹಿಳೆಯರು ತಮ್ಮ ಕುಟುಂಬದ ನಿರ್ವಹಣೆ ಕೂಡ ನಿರ್ವಹಿಸಬಹುದು ಎಂದು ಸ್ಥಳೀಯ ಶಾಸಕ ಟಿ ರಘುಮೂರ್ತಿ ಹೇಳಿದರು.

ಅವರು ನಗರದ ಶಾಸಕರ ಭವನದ ಆವರಣದಲ್ಲಿ ಡಿ .ದೇವರಾಜ ಅರಸು ನಿಗಮದಿಂದ ಸುಮಾರು 36 ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳ ನೀಡುವುದರ ಮೂಲಕ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿ ಯೋಜನೆಗಳಲ್ಲಿ ಶಕ್ತಿ ಯೋಜನೆ, ಗೃಹಲಕ್ಷ್ಮಿ ಯೋಜನೆ ಹೀಗೆ ಬಹು ಪಾಲು ಮಹಿಳೆಯರಿಗೆ ಸ್ವಾವಲಂಬಿ ಜೀವನಕ್ಕೆ ಹಿಂಬು ನೀಡುವುದರ ಮೂಲಕ ನಮ್ಮ ಸರ್ಕಾರ ಮಾಡುತ್ತಿದೆ, ಅದರಂತೆ ಹೊಲಿಗೆ ಯಂತ್ರಗಳ ಮೂಲಕ ತಮ್ಮ ಸ್ವಾವಲಂಬಿ ಜೀವನವನ್ನು ನಡೆಸಬಹುದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಆರ್. ಮಂಜುಳಾ ಪ್ರಸನ್ನ ಕುಮಾರ್, ಉಪಾಧ್ಯಕ್ಷೆ ಕವಿತಾ ಬೋರಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ. ಮಲ್ಲಿಕಾರ್ಜುನ , ಸದಸ್ಯ ರಮೇಶ್ ಗೌಡ, ಪರುಶುರಾಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಶಿಧರ್, ಮುಖಂಡರು, ಸಾರ್ವಜನಿಕರು ಮತ್ತಿತರರು ಪಾಲ್ಗೊಂಡಿದ್ದರು

About The Author

Namma Challakere Local News
error: Content is protected !!