ಚಳ್ಳಕೆರೆ :
ಪ್ರಸ್ತುತ ದಿನಮಾನಗಲ್ಲಿ ಸರ್ಕಾರದ ನೌಕರಿ ಒಡೆಯಲು ರಾತ್ರಿ ಹಗಲು ಎನ್ನದೆ ವ್ಯಾಸಂಗ ಮಾಡಿದರೆ ನೌಕರಿ ಸುಗುವುದು ಕಷ್ಟ ಸಾಧ್ಯ ಅಂತದರಲ್ಲಿ ಹಳ್ಳಿಗಳಿಂದ ನಗರ ಪ್ರದೇಶದ ಗ್ರಂಥಾಲಯಕ್ಕೆ ಬಂದು ಊಟವಿಲ್ಲದೆ ಓದುವು ಸ್ಪರ್ಧಾತ್ಮಕ ಯುವಕರಿಗೆ ಆಸರೆಯಾಗಬೇಕಿದ್ದ ಗ್ರಂಥಾಲಯಗಳು ಇಂದು ಸ್ಪರ್ಧಾ ವಿದ್ಯಾರ್ಥಿಗಳಿಗೆ ಮಾರಕ ವಾಗಿವೆ ಎಂಬುದಕ್ಕೆ ಚಳ್ಳಕೆರೆ ನಗರದ ಗ್ರಂಥಾಲಯವೇ ಸಾಕ್ಷಿಕರಿಸುತ್ತದೆ.
ಹೌದು ಚಳ್ಳಕೆರೆ ನಗರದ ಬುಡಕಟ್ಟು ಸಂಪ್ರದಾಯ ಹಾಸುಹೊದ್ದ ಪಟ್ಟಣ ಆದರೆ ಇಂತಹ ನೆಲದಲ್ಲಿ ಕೃಷಿಕತ ಮಕ್ಕಳು ಉನ್ನತ ವ್ಯಾಸಂಗದ ಕನಸು ಕಟ್ಟಿಕೊಂಡು ಸ್ಥಳೀಯ ವಾಗಿ ಹಾಗೂ ಮನೆಯಲ್ಲಿ ಓದುವ ಕೊಠಡಿಗಳು ಇಲ್ಲದೆ ಇರುವ ಕಾರಣ ಗ್ರಂಥಾಲಯದಲ್ಲಿ ಓದುವ ವಿದ್ಯಾರ್ಥಿ ಸಮೂಹಕ್ಕೆ ದಿನದಲ್ಲಿ 12 ಗಂಟೆಗಳ ಕಾಲಾವಕಾಶ ನೀಡಬೇಕು ಆದರೆ ಅದುಯಾಕೋ ಕೆಲವು ಕಾರಣಗಳನ್ನು ನೀಡಿ ಸರಕಾರದ ರಜೆ ದಿನಗಳು ಎಂದು ಉತ್ತರ ನೀಡಿ ಓದುವ ಸ್ಪರ್ಧಾ ವಿದ್ಯಾರ್ಥಿಗಳಿಗೆ ಬಾಗಿಲು ಹಾಕುವುದರಿಂದ ನೂರಾರು ವಿದ್ಯಾರ್ಥಿಗಳು ನೌಕರಿ ಕೈವಮಚೆಲ್ಲಿ ಕೂರುವಂತಾಗಿದೆ.
ಇನ್ನಾದರೂ ಜಿಲ್ಲಾಧಿಕಾರಿಗಳು ತಾಲೂಕು ಹಾಗೂ ನಗರ ಗ್ರಂಥಾಲಯಗಳಿಗೆ ವಿಶೇಷ ಸಿಬ್ಬಂದಿಯನ್ನು ನೇಮಕಾತಿ ಮಾಡಿ ಸಾವಿರಾರು ಸ್ಪರ್ಧಾ ವಿದ್ಯಾರ್ಥಿಗಳ ಬಾಳಿಗೆ ಬೆಳಕು ಹಾಗಬೇಕು ಎಂಬುದು ಕಾದು ನೋಡಬೇಕಿದೆ.

