ಚಳ್ಳಕೆರೆ : ‌ರೈತನ ಮಗನಾದ ನಾನು ರೈತ ಪರವಾದ ಯೋಜನೆಗಳನ್ನು ಕ್ಷೇತ್ರದ ವ್ಯಾಪ್ತಿಯಲ್ಲಿ ತಂದಿದ್ದೆನೆ ಎಂದು ಸ್ಥಳೀಯ ಶಾಸಕ ಟಿ.ರಘುಮೂರ್ತಿ ಹೇಳಿದರು .

ಅವರು ನಗರದ ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಆವರಣದಲ್ಲಿ ರಾಷ್ಟ್ರೀಯ ರೈತರ ದಿನಾಚರಣೆ ಹಾಗೂ ಆತ್ಮ ಯೋಜನೆಯಡಿ ರೈತರಿಗೆ ತರಬೇತಿ ಕಾರ್ಯಾಗಾರದಲ್ಲಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು,

ಭಾರತೀಯ ಕೃಷಿ ವ್ಯವಸ್ಥೆಯಲ್ಲಿ ಪ್ರಸ್ತುತ ದಿನಮಾನದಲ್ಲಿ ಮುಂದುವರಿದಿದೆ, ಇನ್ನೂ ರೈತರ ಕಲ್ಯಾಣಕ್ಕಾಗಿ ನಮ್ಮ ರಾಜ್ಯ ಸರಕಾರ
ಅಲವಾರು ಯೋಜನೆಗಳನ್ನು ಜಾರಿಗೆ ತಂದಿದೆ, ಕೃಷಿಗೆ ಪೂರಕವಾಗಿ ಬೆಳವಣಿಗೆ ಚೌದರಿ ಚರಣ್ ಸಿಂಗ್ ಮೈಲುಗಲ್ಲು ಹಾಕಿದ್ದಾರೆ‌

ಚಿತ್ರದುರ್ಗ ಜಿಲ್ಲೆಯ ಗಮನರ್ಹ ಬದಲಾವಣೆ ತರಲಾಗಿದೆ, ಇಂದು ವೇದಾವತಿ ನೀರು ರೈತರ ಬಾಳಿಗೆ ವರದಾನವಾಗಿದೆ ಅದರಂತೆ ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲಾ ಕೆರೆಗಳಿಗೆ ಅಪ್ಪರ ಭದ್ರ ಯೋಜನೆಯಲ್ಲಿ ನೀರು ತುಂಬಿಸುವ ಕೆಲಸವಾಗುತ್ತದೆ ಎಂದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ, ವೈವಿಧ್ಯಮಯ ಬೆಳೆಗಳ ಬೆಳೆಯುವುದರ ಮೂಲಕ ಉತ್ತಮ ಬೆಳೆ ಬೆಳೆಯಲು ಕೃಷಿಗೆ ಪೂರಕವಾದ ನೀರಾವರಿ ಮೂಲ ನಮ್ಮ ಕ್ಷೇತ್ರದಲ್ಲಿ ಇದೆ, ಕೃಷಿಯಲ್ಲಿ ಭದ್ರತೆ ಹೊದಗಿಸಿದ ಸ್ಥಳೀಯ ಶಾಸಕರು ಟಿ.ರಘುಮೂರ್ತಿ ಅವರು ನಮ್ಮೆಲ್ಲರ ಭರವಸೆ ಬೆಳಕು ಎಂದರು.

ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಮಾತನಾಡಿ, ಚೌಧರಿ ಚರಣ್ ಸಿಂಗ್ ಅವರು ಅಲ್ಪಾವಧಿಗೆ ಭಾರತದ ಪ್ರಧಾನ ಮಂತ್ರಿಯಾಗಿದ್ದವರು. ಜುಲೈ 1979ರಲ್ಲಿ ಪ್ರಧಾನಿಯಾಗಿ ಹುದ್ದೆ ವಹಿಸಿ 1980ರ ಜನವರಿಯವರಿಗೆ ಇದ್ದರು. ಈ ಅವಧಿಯಲ್ಲಿ ರೈತರ ಕಲ್ಯಾಣಕ್ಕೆ ಅವರು ತಂದ ಯೋಜನೆಗಳು ಇಂದಿಗೂ ಜನಪ್ರಿಯ. ರೈತರ ಪರವಾಗಿ ರೈತಸ್ನೇಹಿ ಯೋಜನೆಗಳನ್ನು ತಂದದ್ದಕ್ಕಾಗಿ ಅವರ ನೆನಪಿನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ ಎಂದರು.

ಕೃಷಿ ಜಂಟಿ ನಿರ್ದೇಶಕ ಮಂಜುನಾಥ್ ಮಾತನಾಡಿ, ಚೌಧರಿ ಚರಣ್ ಸಿಂಗ್ ಮೀರತ್ ನ ನೂರ್ಪುರ್ ನಲ್ಲಿ 1902ರ ಡಿಸೆಂಬರ್ 23ರಂದು ಜನಿಸಿದರು. ಕೃಷಿ ಆರ್ಥಿಕತೆಯ ಮಹತ್ವವನ್ನು ಅವರು ಅರಿತು ದೇಶದ ರೈತರ ಪರಿಸ್ಥಿತಿಯನ್ನು ಗುರುತಿಸಿ ಅದಕ್ಕೆ ಪೂರಕವಾದ ಯೋಜನೆಗಳನ್ನು ತಂದಿದ್ದರು. ಅದರಂತೆ ಕೃಷಿಯಲ್ಲಿ ಭದ್ರತೆ ಹೊದಗಿಸಿದ ಸ್ಥಳೀಯ ಶಾಸಕರು ಟಿ.ರಘುಮೂರ್ತಿ ತಾಲೂಕಿನ ರೈತರ ಪರವಾದ ನೀರಾವರಿ ಯೋಜನೆ, ಭದ್ರಮೆಲ್ದಂಡೆ ಯೋಜನೆ ಈಗೇ ರೈತರ ಪರವಾಗಿದ್ದಾರೆ.
ಇನ್ನೂ ಕೆ250 ಧಾರವಾಡ ಶೇಂಗಾ ತಳಿ ಪ್ರಯೋಗ ಮಾಡಿದ್ದಾರೆ,
ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಿದೆ ಆದರೆ ಉತ್ಪಾದನೆ ಕೊರತೆ ಯಾಗಿದೆ, ಇನ್ನೂ ಕಡಿಮೆ ಅವಧಿಯ 125 ದಿನಗಳ ತೊಗರಿ ಬೆಳೆ ಕಟಾವಿಗೆ ಬರುವ ತಳಿ ಪರಿಚಯ ಮಾಡಿದ್ದೆವೆ.
ರೈತರ ಹೈನುಗಾರಿಕೆ ಹೆಚ್ಚಳಕ್ಕಾಗಿ
ಮೂರು ಕೋಟಿ ಅನುದಾನ ನೀಡಲು ಪಶುಸಂಗೋಪನೆ ಇಲಾಖೆಗೆ ವಹಿಸಿದೆ.
ರೈತರು ಬಿತ್ತನೆ ಮಾಡಿದ ಬೆಳೆಗಳಿಗೆ ಪೂರಕವಾದ 10,020 ಸಾವಿರ ಮಣ್ಣು ಪರೀಕ್ಷೆ ಕಾರ್ಡ್ ಗಳನ್ನು ವಿತರಣೆ ಮಾಡಿದ್ದೆವೆ ಎಂದರು.

ಇದೇ ಸಂಧರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ, ಕೆಪಿ.ಭೂತಯ್ಯ, ಚಿಕ್ಕಣ್ಣ, ಕಿಸಾನ್ ನಾಗರಾಜ್,
ಜಿಲ್ಲಾ ನಾಮ ನಿರ್ದೇಶನ ಸದಸ್ಯ ರಂಗಸ್ವಾಮಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ವಿಶ್ವನಾಥ್, ಕೆಡಿಪಿ ಸದಸ್ಯ ರಮೇಶ್, ಬಸವರಾಜ್, ನೇತ್ರಾವತಿ ಪಾಲಯ್ಯ, ಜಾಕೀರ್ ಹುಸೇನ್, ಸುರೇಶ್, ಶ್ರೀನಿವಾಸ್, ಕರಿಕೆರೆ ತಿಪ್ಪೇಸ್ವಾಮಿ, ಸಿಟಿ ವೀರೇಶ್, ದಯಾನಂದ ಮೂರ್ತಿ, ಡಾ.ಶಿವಲಿಂಗಪ್ಪ, ತಹಶಿಲ್ದಾರ್ ರೇಹಾನ್ ಪಾಷ, ಇಓ ಹೆಚ್ ಶಶಿಧರ್,

ಉಪ ಕೃಷಿ ನಿರ್ದೇಶಕ
ಉಮೇಶ್, ಸಹಾಯಕ ಕೃಷಿ ನಿರ್ದೇಶಕ ರಮೇಶ್, ರೇಷ್ಮೆ ಇಲಾಖೆ ಸಹಾಯಕ ಅಧಿಕಾರಿಗಳು, ,ಮೀನುಗಾರಿಕೆ ಸಹಾಯಕ ಅಧಿಕಾರಿಗಳು, ಪಶುಸಂಗೋಪನೆ ಅಧಿಕಾರಿಗಳು, ಇತರರು ರೈತ ಮುಖಂಡರು ಇದ್ದರು.

About The Author

Namma Challakere Local News
error: Content is protected !!