ಚಿತ್ರದುರ್ಗ: ಕೋಟೆ ಒತ್ತುವರಿ ತೆರವುಗೊಳಿಸಿ
ಚಿತ್ರದುರ್ಗ ಐತಿಹಾಸಿಕ ಕೋಟೆ ಮತ್ತು ಸ್ಮಾರಕಗಳ ಸುತ್ತ ಒತ್ತುವರಿ
ಮಾಡಿಕೊಂಡಿರುವ ಮನೆಗಳನ್ನು ಕೂಡಲೇ ತೆರವುಗೊಳಿಸುವಂತೆ
ಕರುನಾಡ ವಿಜಯ ಸೇನೆ ಇಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ
ಪ್ರತಿಭಟನೆ ನಡೆಸಿದೆ. ವಾಸವಿ ಶಾಲೆ, ಧರ್ಮಶಾಲೆ ಬಳಿ ಹಾಗೂ
ಬುರುಜನಹಟ್ಟಿ ಬಳಿ ಒತ್ತುವರಿ ಮಾಡಿಕೊಂಡು ಮನೆಗಳನ್ನು
ನಿರ್ಮಿಸಲಾಗಿದೆ ಎಂದು ಸೇನೆ ಆರೋಪಿಸಿದೆ. ಜಿಲ್ಲಾಡಳಿತ ಈ
ಒತ್ತುವರಿಗಳನ್ನು ತೆರವುಗೊಳಿಸಬೇಕು ಎಂದು ಪ್ರತಿಭಟನಾಕಾರರು
ಆಗ್ರಹಿಸಿದ್ದಾರೆ.

