ಚಿತ್ರದುರ್ಗ: ಒಳಮೀಸಲಾತಿ ದುರ್ಬಳಕೆ ವಿರುದ್ಧ
ಕಾನೂನು ಜಾರಿಗೆ ತನ್ನಿ
ಮಾಜಿ ಸಚಿವ ಹೆಚ್. ಆಂಜನೇಯ ಅವರು ಚಿತ್ರದುರ್ಗದಲ್ಲಿಂದು
ಪತ್ರಿಕಾ ಗೋಷ್ಠಿ ನಡೆಸಿ, ಒಳ ಮೀಸಲಾತಿ ದುರ್ಬಳಕೆ
ಮಾಡಿಕೊಳ್ಳುತ್ತಿರುವವರ ವಿರುದ್ಧ ಸರ್ಕಾರ ಕೂಡಲೇ ಉಗ್ರವಾದ
ಕಾನೂನನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು. ಒಳ
ಮೀಸಲಾತಿ ನೀಡುವಲ್ಲಿ ಗುಂಪುಗಳನ್ನು ಮಾಡಲಾಗಿದ್ದು, ಹೊಲೆಯ
ಸಮಾಜದ ಬಿ ಗುಂಪಿನವರು ಮಾದಿಗ ಸಮಾಜದ ಎ ಗುಂಪಿಗೆ
ಬಂದು ಮೀಸಲಾತಿ ದುರ್ಬಳಕೆ ಮಾಡಿಕೊಳ್ಳುವ ಹುನ್ನಾರ
ನಡೆಸುತ್ತಿದ್ದಾರೆ. ಇದನ್ನು ತಡೆಯಲು ಸರ್ಕಾರ ಕಠಿಣ ಕಾನೂನು
ಜಾರಿಗೆ ತರಬೇಕು ಎಂದು ಅವರು ಆಗ್ರಹಿಸಿದರು.

