ಚಳ್ಳಕೆರೆ :
ನಿವೃತ್ತ ಸರಕಾರಿ ನೌಕರರ ಬೇಡಿಕೆ ಈಡೇರಿಸುವರೆಗೆ ಫೆ.28 ರಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅನಿರ್ದಿಷ್ಟವಾಗಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತದೆ ಎಂದು ಜಿಲ್ಲಾ ನಿವೃತ್ತ ನೌಕರರ ಸಂಚಾಲಕ ಡಿ.ದಯಾನಂದ ಹೇಳಿದರು.
ಅವರು ನಗರದ ಸರಕಾರಿ ನೌಕರರ ಭವನದಲ್ಲಿ ನಿವೃತ್ತ ನೌಕರರ ಬೇಡಿಕೆಗಳ ಈಡೇರಿಕೆಗೆ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಇನ್ನೂ ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ ಸರಕಾರಿ ಸೇವೆಯಿಂದ ನಿವೃತ್ತ ಹೊಂದಿದ ನೌಕರರು ಸಂಕಷ್ಟದಲ್ಲಿ ಇದ್ದಾರೆ, ಅವರ ಕುಟುಂಬ ನಿರ್ವಹಣೆ ಕೂಡ ಕಷ್ಟಕರವಾಗಿದೆ ಆದ್ದರಿಂದ ಏಳನೇ ವೇತನ ಆಯೋಗದ ಮೂಲಕ ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ಸರಕಾರ ನೀಡಬೇಕು,
ಈಡೀ ರಾಜ್ಯದಲ್ಲಿ ಎರಡು ವರ್ಷದ ಅವಧಿಯಲ್ಲಿ ನಿವೃತ್ತರಾದ ಸುಮಾರು 27600 ನೌಕರರು ಹಾಗೂ ಚಳ್ಳಕೆರೆ ತಾಲೂಕಿನಲ್ಲಿ ಸು.220 ನೌಕರರ ನಿವೃತ್ತಿ ಹೊಂದಿದ್ದಾರೆ ಈವರೆಗೆಲ್ಲ ಭದ್ರತೆ ಇಲ್ಲದೆ ಇದ್ದಾರೆ, ಆದ್ದರಿಂದ ಸರಕಾರ ನಮ್ಮ ಹೋರಾಟಕ್ಕೆ ಮಣಿಯದಿದ್ದರೆ ನಮ್ಮ ಹೋರಾಟ ಹಾದಿ ತ್ರೀವಗೊಳಿಸಲಾಗುತ್ತದೆ, ಈ ಹೋರಾಟಕ್ಕೆ , ನಮ್ಮ ಬೆಂಬಲವಾಗಿ ಅಣ್ಣಾ ಅಜಾರೆ, ನಿವೃತ್ತ ಲೋಕಯುಕ್ತ ನ್ಯಾಯಮೂರ್ತಿಗಳಾದ ಸಂತೋಷ್ ಹೆಗ್ಡೆ, ಈಗೇ ಹಲವರು ಭಾಗವಹಿಸಲಿದ್ದಾರೆ ಎಂದರು.
ಇದೇ ಸಂಧರ್ಭದಲ್ಲಿ
ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ತಾಲ್ಲೂಕು ಸಂಚಾಲಕ ಪ್ರಕಾಶ್, ಜಿಲ್ಲಾ ಸಂಚಾಲಕ ಡಿ.ದಯಾನಂದ್,ಮಾರಣ್ಞ,
ಶಬಿನ್ ಹುನ್ನಿಸ್ ,
ಹಿರಿಯ ಶಿಕ್ಷಕರು, ಹಾಗೂ ಇತರರು ಪಾಲ್ಗೊಂಡಿದ್ದರು.

