ಬಂಜಾರ ಸಮುದಾಯ ಶೈಕ್ಷಣಿಕವಾಗಿ ಮುಂದೆ ಬರಬೇಕಿದೆ : ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಮಲ್ಲಿಕಾರ್ಜುನ
ಚಳ್ಳಕೆರೆ : ಈಡೀ ಪ್ರಪಂಚದ ಮೂಲೆ ಮೂಲೆಗೆ ಹೋದರು ಒಂದೇ ಭಾಷೆಯನ್ನು ಮಾತನಾಡುವ ಏಕೈಕ ಸಮುದಾಯ ಎಂದರೆ ಅದು ಬಂಜಾರ ಸಮುದಾಯ ಎಂದುನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಮಲ್ಲಿಕಾರ್ಜುನ ಹೇಳಿದರು.
ಅವರು ನಗರದ ತಾಲ್ಲೂಕು ಕಛೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಆಯೋಜಿಸಿದ್ದ ಸಂತ ಶ್ರೀ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು,
ಚಿತ್ರದುರ್ಗ ಜಿಲ್ಲೆ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮತ್ತು ಸಾಂಸ್ಕೃತಿಕ ಆಚಾರ ವಿಚಾರಗಳಿಗೆ ಹಿಡಿದ ಕೈಗಡಿಯಾಗಿದೆ, ಈ ಭಾಗದಲ್ಲಿರುವಂತಹ ಬುಡಕಟ್ಟು ಸಂಸ್ಕೃತಿಗಳು ಬಂಜಾರ ಜನಾಂಗದ ವೈವಿಧ್ಯಮಯವಾದಂತಹ ಬದುಕು ಸಮಾಜದ ವೈಶಿಷ್ಟ್ಯತೆಗೆ ದಾರಿ ದೀಪವಾಗಿದೆ, ಆದ್ದರಿಂದ ಮಕ್ಕಳಿಗೆ ಶಿಕ್ಷಣ ನೀಡುವುದರ ಮೂಲಕ ಶೈಕ್ಷಣಿಕವಾಗಿ ಮುಂದೆ ಬನ್ನಿ ಎಂದರು.
ತಹಶಿಲ್ದಾರ್ ರೇಹಾನ್ ಪಾಷ
ಮಾಡಿನಾಡಿ, ಶೈಕ್ಷಣಿಕವಾಗಿ ಕಾಲಕ್ಕೆ ತಕ್ಕಂತೆ ಬದಲಾವಣೆ ಆಗಬೇಕಾಗಿದೆ ಜನಾಂಗದ ಪ್ರತಿ ಕುಟುಂಬದಲ್ಲಿ ಮಕ್ಕಳಿಗೆ ಅಗತ್ಯವಾಗಿ ಉನ್ನತ ಶಿಕ್ಷಣ ಮತ್ತು ಆಧ್ಯಾತ್ಮಿಕ ಶಿಕ್ಷಣವನ್ನು ಒದಗಿಸಬೇಕಾಗಿದೆ ಇದರಿಂದ ಸ್ವಾಭಿಮಾನದ ಬದುಕನ್ನು ಕಂಡುಕೊಳ್ಳಲು ಸಹಕಾರಿಯಾಗುವುದು ಗ್ರಾಮದಲ್ಲಿ ಸ್ವಾವಲಂಬನೆಯನ್ನು ಕೂಡ ಹೊಂದಲು ಸಾಧ್ಯವಾಗುತ್ತದೆ. ಸಂತ ಸೇವಾಲಾಲ್ ರವರು ಬಂಜಾರ ಜನಾಂಗದ ಸಾಮಾಜಿಕ ಜನಜೀವನದ ಬದಲಾವಣೆಗೆ ದಾರಿದೀಪವಾದಂತವರು ಇವರ ಆದರ್ಶಗಳನ್ನು ಎಲ್ಲ ಜನಾಂಗದವರು ಮೈಗೂಡಿಸಿಕೊಳ್ಳಬೇಕು ಎಂದರು.
ಇನ್ನೂಡಾ. ಚಂದ್ರನಾಯ್ಕ್ ಮಾತನಾಡಿ, ಸಂತ ಸೇವಾ ಲಾಲ್ ಹುಟ್ಟಿದ ಆ ಕ್ಷಣ ಈಡೀ ಭೂಮಿ ಹಸಿರಾಗಿತ್ತು ಎಂದು ಇತಿಹಾಸದ ಕುರುವು ಇದೆ. ಆದರಂತೆ ಈಡೀ ರಾಜ್ಯದಲ್ಲಿ ದೇಶದಲ್ಲಿ ಲಂಬಾಣಿ ಸಮುದಾಯ ತನ್ನದೇ ಆದ ಅಸ್ತಿತ್ವ ಹೊಂದಿದೆ ಅದರಂತೆ ಎಲ್ಲಾರೂ ಶಿಕ್ಷಣ ಪಡೆಯಬೇಕು ಎಂದರು.
ಈದೇ ಸಂಧರ್ಭದಲ್ಲಿ ಪುರುಷೋತ್ತಮ, ಹಾಗೂ ಇತರ ಸಮಾಜದ ಮುಖಂಡರು,ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾಬಾಯಿ, ಮಾತನಾಡಿದರು,
ಎಸ್.ಗೊಂವಿದ್ ನಾಯ್ಕ, ಇತರ ಪ್ರಮುಖ ಮುಖಂಡರು ಪಾಲ್ಗೋಂಡಿದ್ದರು.


