“ನವರಾತ್ರಿ ಪ್ರಯುಕ್ತ ಸಾಮೂಹಿಕ ಶ್ರೀದೇವಿಸ್ತುತಿ ಪಾರಾಯಣ ಮತ್ತು ದೇವಿ ಭಜನೆಗಳ ಕಾರ್ಯಕ್ರಮ”.
ಚಳ್ಳಕೆರೆ:-ನಗರದ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ವಿಜಯಲಕ್ಷ್ಮೀ ರಾಮರೆಡ್ಡಿ ಅವರ ಶಿವನಗರದ ನಿವಾಸದಲ್ಲಿ “ನವರಾತ್ರಿ”ಯ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ “ಶ್ರೀದೇವಿಸ್ತುತಿ ಪಾರಾಯಣ ಮತ್ತು ವಿಶೇಷ ದೇವಿ” ಭಜನೆಗಳ ಕಾರ್ಯಕ್ರಮ ನಡೆಯಿತು.
ಪಾರಾಯಣ ಸತ್ಸಂಗದಲ್ಲಿ ಸದ್ಭಕ್ತರಾದ ಶ್ರೀಮತಿ ವಿಜಯಲಕ್ಷ್ಮೀ ರಾಮರೆಡ್ಡಿ,ತ್ರಿವೇಣಿ, ಪ್ರಿಯಾಂಕ, ಗೌತಮಿ, ಸಿ.ಎಸ್.ಭಾರತಿ,ಎಂ ಗೀತಾ ನಾಗರಾಜ್,ಈಶಾನ್ ಗೌತಮ್, ಪಿ.ಎಸ್.ಮಾಣಿಕ್ಯ ಸತ್ಯನಾರಾಯಣ, ಕವಿತಾ ಗುರುಮೂರ್ತಿ, ವಿಶಾಲಾಕ್ಷಿ ಪುಟ್ಟಣ್ಣ, ಜಿ.ಯಶೋಧಾ ಪ್ರಕಾಶ್, ಜಯಶೀಲಮ್ಮ, ಭ್ರಮರಂಭಾ, ವೀರಮ್ಮ, ಯತೀಶ್ ಎಂ ಸಿದ್ದಾಪುರ,ಶೈಲಜ, ಕೃಷ್ಣವೇಣಿ, ಸುಧಾಮಣಿ, ಸರಸ್ವತಿ,ಕೆ.ಎಸ್ ವೀಣಾ,ದ್ರಾಕ್ಷಾಯಣಿ ಭಾಗವಹಿಸಿದ್ದರು.

