ಸಾಮಾಜಿಕ ನ್ಯಾಯ ನೀಡುವ ಪಕ್ಷ ಕಾಂಗ್ರೆಸ್ ಪಕ್ಷ ಕಾಂಗ್ರೆಸ್ ಮುಖಂಡ ಧನಂಜಯ.
ನಾಯಕನಹಟ್ಟಿ:: ಮಾಜಿ ಶಾಸಕ ಎಸ್ ತಿಪ್ಪೇಸ್ವಾಮಿ ಕಾಂಗ್ರೆಸ್ ಪಕ್ಷದ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಕೈಬಿಡಬೇಕು. ಎಂದು ಕಾಂಗ್ರೆಸ್ ಮುಖಂಡ ಧನಂಜಯ ಹೇಳಿದರು.
ಗುರುವಾರ ನಾಯಕನಹಟ್ಟಿ ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು ಸರ್ವರಿಗೂ ಸಮಬಾಳು ಸರ್ವರಿಗೆ ಸಮಪಾಲು ಎನ್ನುವ ಸಿದ್ಧಾಂತವನ್ನು ಇಟ್ಟುಕೊಂಡಿರುವ ನಮ್ಮ ಕಾಂಗ್ರೆಸ್ ಬಗ್ಗೆ ಮಾಜಿ ಶಾಸಕ ಎಸ್ ತಿಪ್ಪೇಸ್ವಾಮಿ ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ನಾಯಕ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಹೇಳಿರುವುದು ಸದ್ಯಕ್ಕೆ ದೂರವಾದ ಸಂಗತಿ ಕಾಂಗ್ರೆಸ್ ಪಕ್ಷದ ನುಡಿದಂತೆ ನಡೆಯುವ ಪಕ್ಷ ನಾಯಕ ಸಮುದಾಯಕ್ಕೆ ಯಾವುದೇ ಅನ್ಯಾಯ ಆಗಿಲ್ಲ. ಪಟ್ಟಣ ಪಂಚಾಯತಿ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಸ್ಥಾಯಿ ಸಮಿತಿ ಆಯ್ಕೆ ವಿಚಾರದಲ್ಲಿ ಶಾಸಕ ಎನ್ ವೈ ಗೋಪಾಲಕೃಷ್ಣರವರ ಹಸ್ತಕ್ಷೇಪ ಇಲ್ಲ ಸುಖ ಸುಮ್ಮನೆ ನಮ್ಮ ಶಾಸಕರ ಬಗ್ಗೆ ಟೀಕೆ ಮಾಡುವುದು ತರವಲ್ಲ ಈ ವಿಚಾರದಲ್ಲಿ ನಮ್ಮ ಶಾಸಕರು ಹೋಬಳಿಯ ಮುಖಂಡರಿಗೆ ಸರ್ವಾಧಿಕಾರವನ್ನು ನೀಡಿದ್ದಾರೆ ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯ ನೀಡುವ ಪಕ್ಷವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಶ್ರೀಕಾಂತ್, ಬೋಸಯ್ಯ ಇದ್ದರು.

