ಚಳ್ಳಕೆರೆ :
ಚಿತ್ರದುರ್ಗ: ಭದ್ರಾ ಕಾಮಗಾರಿ ತ್ವರಿತವಾಗಿ
ನಡೆಯುತ್ತಿದೆ
ಭದ್ರಾ ಮೇಲ್ದಂಡೆ ಯೋಜನೆಗೆ ಕಾಂಗ್ರೆಸ್ ಸರ್ಕಾರ ಕಾಲಕಾಲಕ್ಕೆ
ಹಣ ಬಿಡುಗಡೆ ಮಾಡುತ್ತಿದೆ.
ಕಾಮಗಾರಿ ತ್ವರಿತವಾಗಿ ನಡೆಯುತ್ತಿದೆ
ಎಂದು ಮಾಜಿ ಸಚಿವ ಹೆಚ್ ಆಂಜನೇಯ ಹೇಳಿದರು.
ಚಿತ್ರದುರ್ಗದಲ್ಲಿ ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿ,
ಚಾನಲ್ ಗೆ ಇದ್ದ ಅಡ್ಡಿ ಆತಂಕಗಳನ್ನು ನಿವಾರಣೆ ಮಾಡಿ
ಬಂದಿದ್ದೇವೆ. ಸುರಂಗ ಮೂಲಕ ಜೇಡಿ ಮಣ್ಣು ಬರುತ್ತಿದ್ದು, ಅದನ್ನು
ಕ್ಲೀನ್ ಮಾಡಿಸಿದ್ದೇವೆ. ಮಣ್ಣು ತುಂಬಿಕೊಂಡಿದ್ದರಿಂದ ನೀರು
ಬರುವುದು ವಿಳಂಬವಾಗಿತ್ತು ಎಂದರು.

