ಹಿಂದೂಳಿದ ವರ್ಗಗಳ ಹರಿಕಾರ ದೇವರಾಜ್ ಅರಸು

ಚಳ್ಳಕೆರೆ : ಅರಸು ಒಬ್ಬರು ಕೇವಲ ರಾಜಾಕರಣೀಯಾಗದೆ, ಸಮಾಜಿಕವಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಭಿವೃಧ್ದಿಗಾಗಿ ಶ್ರಮಿಸಿದ ದಿಮಂತ ವ್ಯಕ್ತಿ ಹಿಂದೂಳಿದ ವರ್ಗಗಳ ಹರಿಕಾರನಾದ ಡಿ.ವದೇವರಾಜ ಅರಸು ಒಬ್ಬರು ಮಾತ್ರ ಎಂದು ತಹಶಿಲ್ದಾರ್ ರೇಹಾನ್ ಪಾಷ ಹೇಳಿದರು.

ಅವರು ನಗರದ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯದಲ್ಲಿ ಹಮ್ಮಿಕೊಂಡಿದ್ದ ಡಿ.ದೇವರಾಜ ಅರಸು ಜನ್ಮ ದಿನಾಚರಣೆ ಸಮಾರಂಭವನ್ನು ಕುರಿತು ಮಾತನಾಡಿದರು. ಇವರು ತಮ್ಮ ಅವಧಿಯಲ್ಲಿ ಹಲವಾರು ಯೋಜನೆಗಳನ್ನು ಜಾರಿ ಗೊಳಿಸುವುದರ ಮೂಲಕ ಬಡ ಜನರ ಬಾಳಿಗೆ ದಾರಿ ದೀಪವಾಗಿದ್ದಾರೆ. ರಾಜಾಕೀಯಕ್ಕೆ ಪ್ರವೇಶ ಮಾಡಿದ ಇವರು ಸುಮಾರು 28 ವರ್ಷಗಳ ಕಾಲ ಉತ್ತಮ ಶಾಸಕರಾಗಿ ಮತ್ತು 8 ವರ್ಷಗಳ ಕಾಲ ಎರಡು ಬಾರಿ ಮುಖ್ಯ ಮಂತ್ರಿಯಾಗಿ ಆಯ್ಕೆ ಯಾಗಿ ಈಡೀ ರಾಷ್ಟç ಒಪ್ಪುವತಂಹ ಯೋಜನೆಗಳನ್ನು ಜಾರಿಗೆ ತಂದರು ಎಂದರು.

ನಗರಸಭೆ ಅಧ್ಯಕ್ಷೆ ಶಿಲ್ಪ
ಮಾತನಾಡಿ, ಅರಸು ರವರು ಕೇವಲ ಒಂದೇ ಜಾತಿ, ಮತ, ಪಂಥ, ಧರ್ಮಕ್ಕೆ ಸೀಮೆತವಾದ ವ್ಯಕ್ತಿಯಲ್ಲ ಅವರು ಎಲ್ಲಾ ಹಿಂದುಳಿದ ಬಡ ಜನರಿಗೆ ಸಿಗುವ ಸೌಲಭ್ಯಗಳನ್ನು ದೊರಕಿಸುವ ಮೂಲಕ ಇಂದು ಅಗ್ರಮಾನ್ಯರಾಗಿದ್ದಾರೆ. ಮಲ ಹೊರುವ ಪಧ್ದತಿಯನ್ನು ಅಂದಿನ ಕಾಲದಲ್ಲಿ ನೀಷೇದ ಮಾಡುವ ಮೂಲಕ ಹಿಂದುಳಿದ ಧರ್ಮದ ಬಗ್ಗೆ ಧ್ವನಿತ್ತಿದ ಏಕೈಕ ವ್ಯಕ್ತಿ ಎಂದರೆ ಅದು ಅರಸು ಒಬ್ಬರು ಎಂದರು.

ಈ ಸಂರ್ಧಭದಲ್ಲಿ ನಗರಸಭೆ ಉಪಾಧ್ಯಕ್ಷೆ ಕವಿತಾ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಮಲ್ಲಿಕಾರ್ಜುನ, ಸದಸ್ಯ ರಾಘವೇಂದ್ರ, ನಾಮನಿರ್ದೇಶನ ಸದಸ್ಯ ವೀರಭದ್ರಪ್ಪ, ಬಿಸಿಎಂ.ವಿಸ್ತಾರಣಾಧಿಕಾರಿ ರಮೇಶ್, ಇಓ ಶಶಿಧರ್, ನಿವೃತ್ತ ಪ್ರಾಧ್ಯಾಪಕ ಡಾ.ಶಿವಲಿಂಗಪ್ಪ, ನೌಕರ ಸಂಘದ ಅಧ್ಯಕ್ಷ ವೀರೇಶ್, , ಇತತರು ಇದ್ದರು.

About The Author

Namma Challakere Local News
error: Content is protected !!