ಚಳ್ಳಕೆರೆ : ಕೇವಲ ಹರಳು ರೂಪದ ಗೊಬ್ಬರ ಬಳಸದೆ ದ್ರವರೂಪದ ರಾಸಾಯನಿಕ ಗೊಬ್ಬರ ಬಳಸುವುದರ ಮೂಲಕ ಉತ್ತಮ ಬೆಳೆಯನ್ನು ಬೆಳೆಯಬಹುದು ಎಂದು ಕೃಷಿ ಅಧಿಕಾರಿ ಅಶೋಕ್ ಹೇಳಿದ್ದಾರೆ
ಅವರು ತಾಲೂಕಿನ ಸಾಣಿಕೆರೆ ಬಳಿ ರೈತರ ಮೆಕ್ಕೆಜೋಳ ಹೊಲಗಳಿಗೆ ಡ್ರೋನ್ ಮೂಲಕ ರಾಸಾಯನಿಕ ಗೊಬ್ಬರ ಸಿಂಪಡಿಸುವುದರ ಮೂಲಕ ರೈತರು ಉತ್ತಮ ಇಳುವರಿ ಪಡೆಯಬಹುದು ಎಂದು ಡ್ರೋನ್ ಪ್ರಾತ್ಯಕ್ಷಿಕೆಯನ್ನು ರೈತರಿಗೆ ವಿವರಿಸುತ್ತ ಮಾತನಾಡಿದರು,
ರೈತರು ರಾಸಾಯನಿಕ ಗೊಬ್ಬರವಾದ ಯೂರಿಯಾ ಬಿಜೆಪಿ ದ್ರವ ರೂಪದಲ್ಲಿ ಸಿಗುವಂತಹ ಗೊಬ್ಬರಗಳನ್ನು ಬಳಸಿ ರೈತರು ಉತ್ತಮ ಬೆಳೆ ಬೆಳೆಯುವುದರ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಹಲವು ರೈತರು ಹಾಗೂ ಕೃಷಿ ಅಧಿಕಾರಿ ತಿಪ್ಪೆಸ್ವಾಮಿ ಇನ್ನಿತರ ಸಿಬ್ಬಂದಿ ವರ್ಗ ಸ್ಥಳದಲ್ಲಿದ್ದ ಡ್ರೋನ್ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿದರು

