ಚಳ್ಳಕೆರೆ :
ಸ್ಥಳೀಯ ಪತ್ರಿಕಾ ಸಂಪಾದಕರ ಮೇಲೆ
ಸರಕಾರಿ ಕಾಲೇಜಿನ ಉಪನ್ಯಾಸಕರೊಬ್ಬರು
ಪತ್ರಕರ್ತನಿಗೆ ಅವಾಚ್ಯವಾಗಿ ನಿಂದಿಸಿದ್ದು, ಕ್ರಮ ಕೈಗೊಳ್ಳುವಂತೆ ಸ್ಥಳೀಯ
ಮಾಧ್ಯಮ ಒಕ್ಕೂಟದಿಂದ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ಸರಕಾರಿ ಕಾಲೇಜಿನ
ಉಪನ್ಯಾಸಕರು ಕಾರ್ಯಕ್ರಮ ಒಂದರಲ್ಲಿ ಸ್ಥಳೀಯ ಪತ್ರಿಕೆಯ
ಕೆ.ಶಿವಕುಮಾರ ಇವರ ಬಗ್ಗೆ ಅವಹೇಳಿನಕಾರಿಯಾಗಿ ಮಾತನಾಡಿದ್ದಾರೆ,
ದೇಶದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ವಾಕ್ ಸ್ವಾತಂತ್ರ್ಯವಿದೆ ಆದರೆ ಉಪನ್ಯಾಸಕರಾದವರು ದುರ್ವತನೆ ತೋರುತ್ತಾ ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕುವ ಕೆಲಸವಾಗುತ್ತಿದೆ,
ಎಂದು ಮೈತ್ರಿ ದ್ಯಾಮಣ್ಣ ಹೇಳಿದ್ದಾರೆ.
ಉಪನ್ಯಾಸಕರಾಗಿ
ಜವಾಬ್ದಾರಿ ಸ್ಥಾನದಲ್ಲಿ ಇರುವಂತ ವ್ಯಕ್ತಿ ಈ ರೀತಿ ಮಾತನಾಡುವುದು
ಸರಿಯಲ್ಲವೆಂದು ಇದನ್ನು ಸಮಾಜವನ್ನು ಮತ್ತು ಸಾರ್ವಜನಿಕರು
ಖಂಡಿಸುತ್ತೇವೆ ಎಂದು ಹೇಳಿದರು.
ರೈತ ಸಂಘದ ಮುಖಂಡ ಬಸವರೆಡ್ಡಿ, ಈಶ್ವರಪ್ಪ, ಉಮೇಶ್
ಬ್ಯಾನರ್ಜಿ, ಮೈತ್ರಿ ದ್ಯಾಮಯ್ಯ. ರೇವಣ್ಣ, ಬಸವರಾಜ್, ಗಂಗಾಧರ, ಸಿದ್ದೇಶ್ ಭಾಗವಹಿಸಿದ್ದರು.

