ಶೇಂಗಾ ಬಿತ್ತನೆ ಬೀಜ ದರವನ್ನು ಕಡಿಮೆ ಮಾಡುವಂತೆ ರೈತರು ಆಗ್ರಹ

ನಾಯಕನಹಟ್ಟಿ:: ಹೋಬಳಿಯಲ್ಲಿ ಮುಂಗಾರು ಬಿತ್ತನೆ ಚುರುಕಾಗಿದ್ದು ಕೃಷಿ ಇಲಾಖೆಯಲ್ಲಿ ಬಿತ್ತನೆ ಬೀಜದ ಶೇಂಗಾ ಕಾಯಿಯನ್ನು ನೀಡಲಾಗುತ್ತದೆ ಹೋಬಳಿಯ ರೈತರು ಇದರ ಕಡಿಮೆ ಮಾಡುವಂತೆ ಸೋಮವಾರ ಕೃಷಿ ಇಲಾಖೆಯ ಅಧಿಕಾರಿ ಈ ಮಂಜುನಾಥ್ ರವರಿಗೆ ಮನವಿ ಸಲ್ಲಿಸಿದ್ದಾರೆ.

ಇದೆ ವೇಳೆ ರೇಖಲಗೆರೆ ಯುವ ಮುಖಂಡ ತಿಪ್ಪೇಸ್ವಾಮಿ ಮಾತನಾಡಿದರು. ರಾಜ್ಯದಲ್ಲಿ ಅತಿ ಕಡಿಮೆ ಮಳೆ ಬೀಳುವ ಹೋಬಳಿ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ನಾಯಕನಹಟ್ಟಿ ಹೋಬಳಿ ಇಲ್ಲಿನ ರೈತರಿಗೆ ವರ್ಷಕ್ಕೆ ಒಮ್ಮೆ ಮಾತ್ರ ಬೆಳೆ ಅಂತಹ ನೆಲದಲ್ಲಿ ಶೇಂಗಾ ಬೆಳೆಯುವುದೇ ಕಷ್ಟ ಸರ್ಕಾರ ದುಬಾರಿ ದರದಲ್ಲಿ ಶೇಂಗಾ ಬೆತ್ತಲೆ ಬೀಜ ವಿತರಣೆ ಮಾಡುತ್ತಿರುವುದು ರೈತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಕೊಡಲೇ ಸರ್ಕಾರದ ಕಡಿಮೆ ಮಾಡಿ ರೈತರಿಗೆ ಬಿತ್ತನೆ ಬೀಜ ವಿತರಣೆ ಮಾಡಬೇಕೆಂದು ಒತ್ತಾಯಿಸಿದರು.

ಇದೆ ವೇಳೆ ಡಿಎಸ್ಎಸ್ ಸಂಚಾಲಕ ಜಿಬಿ ತಿಪ್ಪೇಸ್ವಾಮಿ ಮಾತನಾಡಿದರು ಬರನಾಡು ಅತಿ ಕಡಿಮೆ ಮಳೆ ಬೀಳುವ ಪ್ರದೇಶ ಒಂದೇ ಖ್ಯಾತಿ ಹೊಂದಿರುವ ನಾಯಕನಹಟ್ಟಿ ಹೋಬಳಿ ಇಲ್ಲಿನ ರೈತರಿಗೆ ಬಿತ್ತನೆ ಬೀಜವನ್ನು ಕಡಿಮೆ ದರದಲ್ಲಿ ನೀಡುವಂತೆ ಕೃಷಿ ಅಧಿಕಾರಿಗೆ ಮನವಿಯನ್ನ ಸಲ್ಲಿಸಿದರು.

ಇದೇ ವೇಳೆ ಕೃಷಿ ಅಧಿಕಾರಿ ಪಿ ಮಂಜುನಾಥ್ ಮಾತನಾಡಿದರು

ಈಸಂದರ್ಭದಲ್ಲಿ ನೀರಾವರಿ ಹೋರಾಟ ಸಮಿತಿ ಸದಸ್ಯ ಜಯಣ್ಣ ರಾಮಸಾಗರ, ಸಣ್ಣ ಪಾಲಯ್ಯ ತಿಪ್ಪೇಸ್ವಾಮಿ, ಗಿಡ್ಡಾಪುರ ರುದ್ರಮುನಿ, ಓಬಯ್ಯನಹಟ್ಟಿ ಸಿ. ಕುಮಾರ್, ಸೇರಿದಂತೆ ರೈತರು ಇದ್ದರು.

About The Author

Namma Challakere Local News
error: Content is protected !!