ಚಳ್ಳಕೆರೆ : ಗ್ರಾಮೀಣ ಪ್ರದೇಶದಿಂದ ಬಂದ ಸಾರ್ವಜನಿಕರಿಗೆ ಸರಕಾರದ ಸೇವೆಯನ್ನು ಕೈಗೆಟುಕುವ ರೀತಿಯಲ್ಲಿ ಜನ ಸ್ನೇಹಿ ಆಡಳಿತ ಮೂಲಕ ಮೂಲಭೂತ ಸೌಲಭ್ಯಗಳನ್ನು ನೀಡುವುದು‌ ಸರಕಾರದ ಅದ್ಯ ಕರ್ತವ್ಯ ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕಿನ ತಳಕು ಹೋಬಳಿ ಕೇಂದ್ರದಲ್ಲಿ ಸುಮಾರು
18.82 ಲಕ್ಷರೂ ವೆಚ್ಚದಲ್ಲಿ ನಾಡಕಚೇರಿಯ ನೂತನ
ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಕಂದಾಯ ಕೆಲಸದ ಒತ್ತಡವಿದ್ದರೂ ಕಂದಾಯ ಇಲಾಖೆ
ಅಧಿಕಾರಿ, ಸಿಬ್ಬಂದಿಗಳು ಉತ್ತಮವಾಗಿ ಕರ್ತವ್ಯ
ನಿರ್ವಹಿಸಿ, ತಮ್ಮ ಜವಾಬ್ದರಿಯನ್ನು ಸಮರ್ಥವಾಗಿ
ನಿಭಾಯಿಸುಮೂಲಕ ಎಲ್ಲರಿಗೂ ಜನಸ್ನೇಹಿ ಆಡಳಿತ
ನೀಡುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ರೇಹಾನ್ ಪಾಷ
ಮಾತನಾಡಿ, ಸರಕಾರ ಮೂಲ ಧ್ಯೆಯದೊಂದಿಗೆ ಸಾರ್ವಜನಿಕರಿಗೆ ಉತ್ತಮ ಆಡಳಿತ ನೀಡುವ
ಉದ್ದೇಶದಿಂದ ಅನೇಕ ಯೋಜನೆಗಳನ್ನು
ಜಾರಿಗೊಳಿಸಲಾಗುತ್ತದೆ ಎಂದರು.

ಇದೇ ಸಂಧರ್ಭದಲ್ಲಿ
ತಳಕು ಗ್ರಾಪಂ ಅಧ್ಯಕ್ಷೆ ಉಮಾ ಕುಮಾರ್, ಗ್ರಾಪಂ
ಸದಸ್ಯರು ರೈತಸಂಘದ ಮುಖಂಡರಾದ ನಿಜಲಿಂಗಪ್ಪ
,ಈರಣ್ಣ . ಮಲ್ಲೇಶಪ್ಪ ಉಪತಹಸೀಲ್ದಾರ್ ರಫಿ ಸಾಬ್, ರಾಜಸ್ವ
ನಿರೀಕ್ಷ ಲಿಂಗೇಗೌಡ, ಗ್ರಾಮ ಆಡಳಿತ ಅಧಿಕಾರಿಗಳು,‌ಸಾರ್ವಜನಿಕರು,
ರೈತರು ಇತರಿದ್ದರು.

About The Author

Namma Challakere Local News
error: Content is protected !!