ಚಳ್ಳಕೆರೆ :

ಗ್ರಾಮದ ಆದಿದೇವತೆ ಸರ್ವರನ್ನು ಸಲುವ ಶ್ರೀ ದುರ್ಗಾಂಬಿಕಾ ದೇವಿ ಗಂಗಾ ಪೂಜೆ ನೂರಾರು ಭಕ್ತರು ಸಮ್ಮುಖದಲ್ಲಿ ಸಂಪ್ರದಾಯ ಬದ್ದವಾಗಿ ಜರುಗಿತು.

ತಾಲೂಕಿನ ಗುಡಿಹಳ್ಳಿ ಸಮೀಪವಿರುವ ವೇದಾವತಿ ತಟದಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಗಂಗಾ ಪೂಜೆಯನ್ನು ನೆರೆವೆರಿಸಿದರು.

ಅದರಂತೆ ತಾಲೂಕಿನ ತಳಕು ಹೋಬಳಿಯ ಚನ್ನಗಾನಹಳ್ಳಿ ಗ್ರಾಮದ ಇತಿಹಾಸ ಪ್ರಸಿದ್ಧಿ ಶ್ರೀ ದುರ್ಗಾಂಭಿಕ ದೇವಿ ಮಹಾತ್ಮೆ
ಎರಡು ದಿನಗಳ ಕಾಲ ನಡೆಯುವ ಶ್ರೀ ದೇವಿ ಉತ್ಸವದಲ್ಲಿ ಕಾಣಬಹುದಾಗಿದೆ.

ಶ್ರೀ ದುರ್ಗಾಂಬಿಕ ದೇವಿ ತನ್ನ ಮಹಾ ಪವಾಡಗಳ ಮೂಲಕ ಪ್ರಸಿದ್ಧಿಯನ್ನು ಪಡೆದಿದ್ದಾಳೆ ಅದರಂತೆ ಮುಂಜಾನೆಯೇ ಭಕ್ತರು ಹರಕೆ ಮೂಲಕ ದೇವಿಯ ಆರಾಧಕರು ದೈವ ಸಂಕಲ್ಪದ ಮೂಲಕ ದೇವಿಯನ್ನು ವೇದಾವತಿ ನದಿ ತಟಕ್ಕೆ ಕರೆದೊಯ್ದು ವಿಧಿ ವಿಧಾನಗಳ ಮೂಲಕ ದೇವಿಯ ಒಪ್ಪತ್ತು ಹರಕೆ, ವಿಶೇಷ ಚಿಲುಮೆ ನೀರಿನಲ್ಲಿ ಗಂಗಾ ಪೂಜೆ ಯೊಂದಿಗೆ ದೇವಿ ಆರಾಧಕರು ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಇನ್ನೂ ತಲಾ ತಲಾಂತರಗಳಿಂದ ನಡೆದು ಬಂದ ಸಂಪ್ರದಾಯ ರೂಢಿಗತವಾದ ಹಟ್ಟಿಯ ಯಜಮಾನರು ಹಾಗೂ ಬಾಬ್ತು ದಾರರು ವಿಶೇಷ ಪೂಜೆ ಸಲ್ಲಿಸುವ ಮೂಲಕ ದೇವಿ ಕೃಪೆಗೆ ಪಾತ್ರರಾಗುತ್ತಾರೆ.

ಇನ್ನೂ ತಮಟೆ ವಾಧ್ಯ, ಊರುಮೆ ಸದ್ದಿಗೆ ಹೆಜ್ಜೆಯನ್ನು ಹಾಕುತ್ತಾ ಸುಮಾರು ಹತ್ತು ಕಿಲೋಮೀಟರ್ ದೂರವಿರುವ ವೇದಾವತಿ ನದಿ ತಟದಲ್ಲಿ ಕಾಲ್ನಡಿಗೆಯ ಮೂಲಕ ದೀವಿ ಆರಾಧಕರು ದೇವಿ ಹೊತ್ತು ನಡೆಯುವ ಸನ್ನಿವೇಶ ನೋಡುಗರನ್ನು ಭಕ್ತಿ ಭಾವನೆಯ ಮೂಲಕ ದೇವಿ ತನ್ನತ್ತ ಸೇಳೆದಿದ್ದಾಳೆ.

About The Author

Namma Challakere Local News
error: Content is protected !!