ಚಳ್ಳಕೆರೆ :
ರಾಜ್ಯದ ಹೆಸರಾಂತ ದಕ್ಷ ಪ್ರಾಮಾಣಿಕ ಜನಸಾಮಾನ್ಯರಿಗೆ ಸ್ಪಂದಿಸಿ ಕೆಲಸ ನಿರ್ವಹಿಸಿದಂತಹ ಉನ್ನತ ಮಟ್ಟದ ಅಧಿಕಾರಿ ಮಹಾಂತೇಶ್ ಬಿಳಗಿ ರವರು ಆಕಸ್ಮಿಕ ರಸ್ತೆ ಅಪಘಾತದಲ್ಲಿ ಮೃತರಾದ ಅವರಿಗೆ ಭಾವ ಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮವನ್ನು
ನೇತಾಜಿ ಸ್ನೇಹ ಬಳಗ ಮತ್ತು ಚಳ್ಳಕೆರೆ ತಾಲೂಕು ಛಾಯಾಚಿತ್ರಗ್ರಾಹಕರ ಸಂಘದ ವತಿಯಿಂದ ಆಯೋಜಿಸಲಾಗಿತ್ತು.
ನಗರದ ನ್ಯಾಷನಲ್ ಸ್ಟುಡಿಯೋ ಬೆಂಗಳೂರು ರಸ್ತೆಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.
ಇದೇ ಸಂಧರ್ಭದಲ್ಲಿ ನೇತಾಜಿ ಸ್ನೇಹ ಬಳಗದ ಅಧ್ಯಕ್ಷರಾದ ನೇತಾಜಿ ಪ್ರಸನ್ನ, ಇತರರು ಇದ್ದರು.

