“ಕ್ಯಾನ್ಸರ್ ರೋಗವ ಮೆಟ್ಟಿ ನಿಂತವರು ಶ್ರೀರಾಮಕೃಷ್ಣರು” ಶ್ರೀಮತಿ ಪಿ.ಎಸ್.ಮಾಣಿಕ್ಯ ಸತ್ಯನಾರಾಯಣ. ಚಳ್ಳಕೆರೆ:- ಶ್ರೀರಾಮಕೃಷ್ಣರು ಗಂಟಲು ಕ್ಯಾನ್ಸರ್ ರೋಗ ಪೀಡಿತರಾದರೂ ಸದಾ ಭಾವಸಮಾಧಿ ನಿಮಗ್ನರಾಗಿ ಭಕ್ತರಿಗೆ ದರ್ಶನ ಮತ್ತು ಅವರೊಂದಿಗೆ ಮಾತುಕತೆ ನಡೆಸುತ್ತಿದ್ದರು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಪಿ.ಎಸ್.ಮಾಣಿಕ್ಯ ಸತ್ಯನಾರಾಯಣ ತಿಳಿಸಿದರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಯುಗಾವತಾರ ಶ್ರೀರಾಮಕೃಷ್ಣ ಭಾಗ-2ರ ಗ್ರಂಥ ಪಾರಾಯಣ ಮಾಡುತ್ತ “ದಕ್ಷಿಣೇಶ್ವರಕ್ಕೆ ವಿದಾಯ” ಎಂಬ ಅಧ್ಯಾಯವನ್ನು ಓದಿ-ವಿವರಣೆ ನೀಡಿದರು. ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀವಿಷ್ಣು ಸಹಸ್ರನಾಮ ಪಠಣ ಭಜನೆ , ದಿವ್ಯತ್ರಯರಿಗೆ ಮಂಗಳಾರತಿ ನಡೆಯಿತು. ಸತ್ಸಂಗ ಸಭೆಯಲ್ಲಿ ವನಜಾಕ್ಷಿ ಮೋಹನ್, ವೆಂಕಟಲಕ್ಷ್ಮೀ, ಯತೀಶ್ ಎಂ ಸಿದ್ದಾಪುರ , ಪುಷ್ಪಲತಾ , ಜಿ.ಯಶೋಧಾ ಪ್ರಕಾಶ್ ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!