ಚಳ್ಳಕೆರೆ : ಸಾರ್ವಜನಿಕರಿಂದ ದೂರುಗಳು ಬಂದರೆ ಅಧಿಕಾರಿಗಳ ಕರ್ತವ್ಯ ಲೋಪ ಎಂಬುದು ಎದ್ದು ಕಾಣುತ್ತಿದೆ, ಆದ್ದರಿಂದ ಯಾವುದೇ ಅಧಿಕಾರಿಗಳ ವಿರುದ್ಧ ದೂರು ಬಂದರೆ ಆಯಾ ವ್ಯಾಪ್ತಿಯ ಅಧಿಕಾರಿಗಳೇ ನೇರ ಹೊಣೆಯಾಗುತ್ತಿರಿ ಎಂದು ಶಾಸಕ ಟಿ.ರಘುಮೂರ್ತಿ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಅವರು ನಗರದ ನಗರಸಭೆ ಸಭಾಂಗಣದಲ್ಲಿ ಪ್ರಗತಿ ಪರೀಶಿಲನೆ ಸಭೆಯಲ್ಲಿ ಮಾತನಾಡಿದ ಅವರು ಇ-ಸ್ವತ್ತು ಖಾತೆ, ಮ್ಯೂಟೇಷನ್, ಸ್ವಚ್ಛತೆ ಕುಡಿಯುವ ನೀರು, ಚರಂಡಿ, ರಸ್ತೆ ಸ್ವಚ್ಚತೆ ಬಗ್ಗೆ ಸಾರ್ವಜನಿಕರಿಗೆ ಅಗತ್ಯವಾದಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ನಗರಸಭೆಯ ಆದ್ಯ ಕರ್ತವ್ಯ, ಆದರೆ ಪ್ರತಿನಿತ್ಯ ಸೋಶಿಯಲ್ ಮೀಡಿಯಾ ಹಾಗೂ ದಿನಪತ್ರಿಕೆಗಳಲ್ಲಿ ನಗರಸಭೆಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ, ಆದ್ದರಿಂದ ನಗರಸಭೆಯಲ್ಲಿ ಕೆಲಸ ಮಾಡಲು ಇಚ್ಛೆ ಇರುವಂತಹ ಅಧಿಕಾರಿಗಳು ಕರ್ತವ್ಯ ನಿರ್ವಹಿಸಿ, ಇಲ್ಲವಾದರೆ ವರ್ಗಾವಣೆ ಮಾಡಿಸಿಕೊಳ್ಳಿ, ಮಾಟನ್ ಮಾರುಕಟ್ಟೆಯಾಗಿದೆ ನಗರಸಭೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನೂ ಬೀದಿ ನಾಯಿಗಳ ಹಾವಳಿಯಿಂದ ಬೇಸತ್ತ ಸಾರ್ವಜನಿಕರ ಹಿತದೃಷ್ಟಿಯಿಂದ ಹೈಕೋರ್ಟ್ ಚಳ್ಳಕೆರೆ ನಗರಸಭೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವುದು ಕಂಡುಬಂದಿದೆ, ಇದುವರೆಗೂ ಕೂಡ ಬೀದಿ ನಾಯಿ ಹಿಡಿಯುವಲ್ಲಿ ನಗರಸಭೆ ಅಧಿಕಾರಿಗಳು ವಿಫಲರಾಗಿದ್ದಾರೆ, ಪಕ್ಕದ ತಾಲೂಕು ಹಿರಿಯೂರಿನಲ್ಲಿ ಬೀದಿ ನಾಯಿಗಳ ಹಿಡಿಯಲು ಟೆಂಡರ್ ಕರೆಯಲಾಗಿದೆ, ಆದರೆ ಇಲ್ಲಿ ಯಾಕೆ ಕಾರ್ಯವಾಗಿಲ್ಲ ಎಂದು ಗರಂ ಆದರು.
ಇನ್ನು ಪೌರಕಾರ್ಮಿಕರು ನೇರಪಾವತಿ ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುವಂತಹ ಪೌರಕಾರ್ಮಿಕರಿಗೆ ನೀಡುವಂತ ವೇತನದಲ್ಲಿ 3.ಸಾ ರೂಪಾಯಿ ಕಡಿಮೆ ಕೊಡುವ ದೂರುಗಳು ಕೇಳಿಬಂದಿವೆ. ಆದ್ದರಿಂದ ಯಾವುದೇ ಕಾರ್ಮಿಕರಿಗೆ ವೇತನ ಕಡಿತ ಆಗದಂತೆ ಸೂಕ್ತ ರೀತಿಯಲ್ಲಿ ವೇತನ ಪಾವತಿಸಬೇಕು ಇನ್ನು ಹೊಸದಾಗಿ ನೇಮಕಾತಿ ಮಾಡಿಕೊಳ್ಳುವಂತಹ 18 ಜನ ಪೌರಕಾರ್ಮಿಕರ ನೇಮಕಾತಿಯಲ್ಲಿ ನೇಮಕಾತಿಗೆ ಸುಮಾರು 136 ಅರ್ಜಿಗಳು ಬಂದಿದ್ದು ಕೂಡಲೇ ಕೂಡಲೇ ಅರ್ಜಿಗಳನ್ನು ಪರಿಶೀಲಿಸಿ ಅರ್ಹತೆ ಇರುವಂತಹವರಿಗೆ ಪೌರಕಾರ್ಮಿಕರನ್ನಾಗಿ ನೇಮಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮೂಲಕ ಸೂಚಿಸಿದರು.
ಇನ್ನು ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಟಿ.ಮಲ್ಲಿಕಾರ್ಜುನ್ ಮಾತನಾಡಿ ಇ- ಸ್ವತ್ತು ವಿಳಂಬ ಬಗ್ಗೆ ಸಾರ್ವಜನಿಕರು ಪ್ರತಿನಿತ್ಯ ಅಳಲು ತೋಡಿಕೊಳ್ಳುತ್ತಿದ್ದಾರೆ, ಇನ್ನು ನಗರಸಭೆ ಕಚೇರಿ ಮುಂದೆ ಕಣ್ಣೀರು ಹಾಕಿಕೊಂಡು ಮನೆಗೆ ಹಿಂತಿರುಗುವಂತಹ ಹಲವಾರು ಸಾರ್ವಜನಿಕರನ್ನು ನಾವು ಕಂಡಿದ್ದೇವೆ ಆದರೆ ನಗರಸಭೆಯ ಅಧಿಕಾರಿಗಳ ಮಾತ್ರ ಇದು ಯಾವುದಕ್ಕೆ ಕ್ಯಾರೆ ಎನ್ನದೆ ಮೌನ ವಹಿಸಿರುವುದು ಒಂದು ಇ- ಸ್ವತ್ತು ಕೊಡಲು ಒಂದು ವರ್ಷ ಅಲೆದಾಡಿಸುವಂತ ನಿರ್ದರ್ಶನ ಕೂಡ ನಮ್ಮ ಕಣ್ಣ ಮುಂದೆ ಇವೆ ಎಂದು ತೀವ್ರವಾಗಿ ಅಸಮಾಧಾನ ವ್ಯಕ್ತಪಡಿಸಿದರು.


