ಪಟ್ಟಣದ ಬೆಸ್ಕಾಂ ಕಚೇರಿಯಲ್ಲಿ ಸಂಭ್ರಮದ ವಿಜಯದಶಮಿ ಆಯುಧ ಪೂಜೆಗೆ ಚಾಲನೆ ನೀಡಿದ ಶಾಖಾಧಿಕಾರಿ ಎನ್. ಬಿ. ಬೋರಣ್ಣ,
ನಾಯಕನಹಟ್ಟಿ:: ಭಾರತೀಯ ಸಂಸ್ಕೃತಿಯಂತೆ ಪ್ರತಿ ವರ್ಷ ಆಯ್ದ ಪೂಜೆ ಆಚರಣೆ ಮಾಡುವುದು ಸಂಪ್ರದಾಯವಾಗಿದೆ ಎಂದು ಪಟ್ಟಣದ ಬೆಸ್ಕಾಂ ಕಚೇರಿಯ ಶಾಖಾಧಿಕಾರಿ ಎನ್ ಬಿ ಬೋರಣ್ಣ ಹೇಳಿದರು.
ಬುಧವಾರ ಪಟ್ಟಣದ ಬೆಸ್ಕಾಂ ಕಚೇರಿಯಲ್ಲಿ ವಿಜಯದಶಮಿ ಆಯುಧ ಪೂಜೆ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದರು. ನಾಯಕನಹಟ್ಟಿ ಬೆಸ್ಕಾಂ ಕಚೇರಿಯಲ್ಲಿ ಪ್ರತಿವರ್ಷದಂತೆ ವಿಜಯದಶಮಿ ಆಯುಧ ಪೂಜೆಯನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗುತ್ತದೆ ನಾಡಿನ ಸಮಸ್ತ ಜನತೆಗೆ ಉತ್ತಮ ಮಳೆ ಬೆಳೆ ಸಮೃದ್ಧಿ ನೀಡುವ ಮೂಲಕ ವಿಜಯದಶಮಿ ಹಬ್ಬ ಪ್ರತಿಯೊಬ್ಬರು ಸಂಭ್ರಮದಿಂದ ಆಚರಣೆ ಮಾಡುವಂತಾಗಲಿ ಎಂದರು.
ಇದೆ ವೇಳೆ ಸಿಬ್ಬಂದಿ ಜಿ ಗೋವಿಂದಪ್ಪ ಮಾತನಾಡಿದರು. ಬೆಸ್ಕಾಂ ಕಛೇರಿಯ ಅಧಿಕಾರಿಗಳ ಆದೇಶದಂತೆ ಪ್ರತಿ ವರ್ಷ ನಾಯಕನಹಟ್ಟಿ ಬೆಸ್ಕಾಂ ಕಚೇರಿಯಲ್ಲಿ ಶಾಖಾಧಿಕಾರಿ ಎನ್ ಬಿ ಬೋರಣ್ಣನವರ ನೇತೃತ್ವದಲ್ಲಿ ಸಂಭ್ರಮದಿಂದ ವಿಜಯದಶಮಿ ಆಯುಧ ಪೂಜೆಯನ್ನು ಆಚರಣೆ ಮಾಡಲಾಗುತ್ತದೆ ಎಂದರು
ಇದೇ ಸಂದರ್ಭದಲ್ಲಿ ಬೆಸ್ಕಾಂ ಕಚೇರಿಯ ಸಿಬ್ಬಂದಿಗಳಾದ ಬಿ.ಪಿ. ಪಾಲಯ್ಯ, ಟಿ. ತಿಪ್ಪೇಸ್ವಾಮಿ, ಎಸ್ ಜಗನ್ನಾಥ್, ಜಾಕೀರ್ ಹುಸೇನ್, ದಿನೇಶ್, ಅಜಯ್ ಕುಮಾರ್, ಸಯಾದ್ ಇರ್ಫಾನ್, ಕಡಲ ಬಾಳು ಷಮಿವುಲ್ಲಾ, ಅಭಿಷೇಕ್, ಸುಲ್ತಾನ್ ಸಾಬ್ ನದಾಫ್, ಶಿವರಾಜ್, ಮಲ್ಲಿಕಾರ್ಜುನ್, ಸೈಯದ್ ಇಮ್ರಾನ್, ಪ್ರದೀಪ ವೀರೇಶ್ ಚಂದ್ರಪ್ಪ ಶಂಕರಮೂರ್ತಿ ಇದ್ದರು.

