ಚಳ್ಳಕೆರೆ:ಆಯುಧಪೂಜೆ ಮತ್ತು ವಿಜಯದಶಮಿ ಹಬ್ಬದ ಪ್ರಯುಕ್ತ ಪೂಜಾ ಸಾಮಗ್ರಿಗಳನ್ನು ಖರೀದಿಸಲು ಜನರು ಇಂದು ಬೆಳಂಬೆಳಗ್ಗೆ ಮುಗಿಬಿದ್ದಿದ್ದರು.
ಹಬ್ಬದ ಪ್ರಯುಕ್ತ ಹೂವುಗಳ ದರದಲ್ಲಿ ಏರಿಕೆ ಇದ್ದರೂ ಖರೀದಿಯ ಭರಾಟೆ ಮಾತ್ರ ಜೋರಾಗಿತ್ತು.
ನಗರದ ನೆಹರು ವೃತ್ತದ ಸಮೀಪ ಮುಖ್ಯ ರಸ್ತೆಗಳ ಬದಿಯಲ್ಲಿ ಬೂದುಗುಂಬಳ, ಬಾಳೆಕಂದು, ಮಾವಿನ ಸೊಪ್ಪು, ನಿಂಬೆಹಣ್ಣುಗಳನ್ನು ಮಾರಾಟ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಈ ವರ್ಷದಲ್ಲಿ ಈವರೆಗೂ ಆಚರಿಸಿದ ಹಬ್ಬಗಳ ಸಂದರ್ಭಕ್ಕೆ ಹೋಲಿಸಿದರೆ, ಸದ್ಯ ಹೂಗಳ ದರ ಗಣನೀಯವಾಗಿ ಹೆಚ್ಚಾಗಿದೆ ಹಾಗಾಗಿ ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಬಿದ್ದಿದೆ. ವ್ಯಾಪಾರಿಗಳಿಗೂ ಗಣನೀಯ ಲಾಭ ಸಿಗುವ ಸಂಭವಿ ವಿದೆ ಎಂಬ ಮಾತು ಕೇಳಿಬಂದಿತು.
ಚಳ್ಳಕೆರೆ ಹಾಗೂ ಮೊಳಕಾಲ್ಮೂರು ಈ ಭಾಗಗಳಲ್ಲಿ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಹೂಗಳನ್ನ ಬೆಳೆಯಲಾಗುತ್ತಿದ್ದು ಇಲ್ಲಿ ಸರಿಯಾದ ಮಾರುಕಟ್ಟೆ ಸಿಗದೆ ಬೆಳಗಾರರು ಸಂಕಷ್ಟ ಕ್ಕೆ ಸಿಲುಕಿದ್ದಾರೆ ಮಧ್ಯವರ್ತಿಗಳ ಹಾವಳಿ ಹೂಗಳ ನೇರ ಮಾರಾಟ ಮಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.. ಇದರಿಂದ ರೈತನಿಗೆ ಲಾಭ ಸಿಗದಿದ್ದರೂ ಮಧ್ಯವರ್ತಿಗಳಿಗೆ ಮಾತ್ರ ಉತ್ತಮ ಲಾಭವಾಗಲಿದೆ ರಿಂದ ಈ ಭಾಗದಲ್ಲಿ ಒಂದು ಹೂವಿನ ಮಾರುಕಟ್ಟೆ ಮಾಡಿಕೊಟ್ಟರೆ ಹೂವಿನ ಬೆಳೆಗಾರರಿಗೆ ಅನುಕೂಲವಾಗಲಿದೆ ಎಂದು ಹೂವಿನ ವ್ಯಾಪಾರಸ್ಥರು ತಿಳಿಸಿದ್ದಾರೆ….

