“ಸ್ವಾಮಿ ಸುಮೇಧಾನಂದಜೀ ಅವರಿಂದ ವಿಶೇಷ ಭಗವನ್ನಾಮ ಸಂಕೀರ್ತನೆ”. ಚಳ್ಳಕೆರೆ:-ಶಿವನಗರದ ಶ್ರೀಮತಿ ಜಿ ಯಶೋಧಾ ಪ್ರಕಾಶ್ ಅವರ ನೇತೃತ್ವದ ಶ್ರೀಶಾರದಾದೇವೀ ಸತ್ಸಂಗ ಕೇಂದ್ರದಲ್ಲಿ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಹೊಸಪೇಟೆಯ ಶ್ರೀರಾಮಕೃಷ್ಣ ಗೀತಾಶ್ರಮದ ಅಧ್ಯಕ್ಷರಾದ ಪೂಜ್ಯ ಸ್ವಾಮಿ ಸುಮೇಧಾನಂದಜೀ ಮಹಾರಾಜ್ ಅವರು “ವಿಶೇಷ ಭಗವನ್ನಾಮ ಸಂಕೀರ್ತನಾ” ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಬೆಂಗಳೂರಿನ ವಿವೇಕಹಂಸದ ರಾಘವೇಂದ್ರ ರಾವ್,ಭಾರ್ಗವ್ ಮತ್ತು ಶ್ರೀಶಾರದಾದೇವೀ ಪ್ರಗತಿ ಮಂದಿರದ ಚಿನ್ಮಯಿ ಅವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಈ ವಿಶೇಷ ಭಗವನ್ನಾಮ ಸಂಕೀರ್ತನೆಯಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಉದಯಕುಮಾರ್, ಸೌಮ್ಯ, ಶ್ರೀಮತಿ ಜಿ ಯಶೋಧಾ ಪ್ರಕಾಶ್, ಶಾಂತಮ್ಮ ಶಾಂತವೀರಪ್ಪ, ನಾಗರತ್ನಮ್ಮ, ಶಾರದಾಮ್ಮ, ಯತೀಶ್ ಎಂ ಸಿದ್ದಾಪುರ, ಗೀತಾ ನಾಗರಾಜ್, ಸೌಮ್ಯ ಉಮೇಶ್, ಸೌಮ್ಯ ಪ್ರಸಾದ್, ಪ್ರೇಮಲೀಲಾ, ಮಾಣಿಕ್ಯ ಸತ್ಯನಾರಾಯಣ, ಅಂಬುಜಾ, ಶೈಲಜ, ಕೃಷ್ಣವೇಣಿ, ಸಂಗೀತ,ಸುಮನಾ ಕೋಟೇಶ್ವರ, ಜಯಶೀಲಮ್ಮ, ಪಂಕಜ ಚೆನ್ನಪ್ಪ,ಕವಿತಾ ಗುರುಮೂರ್ತಿ, ಯುಕ್ತ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.

About The Author

Namma Challakere Local News
error: Content is protected !!