ಚಳ್ಳಕೆರೆ: ಹಿಂದೂ ಧರ್ಮ ನಿನ್ನೆ ಮೊನ್ನೆಯದಲ್ಲ ಪುರಾತನ ಕಾಲದ ಇತಿಹಾಸ ಇರುವಂತ ಧರ್ಮ, ಇಂತಹ ಧರ್ಮವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವಂತ ಕಾರ್ಯ ವಾಗಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತೀರ್ಥಹಳ್ಳಿಯ ಪ್ರಚಾರಕರು ಹಾಗೂ ಶಿವಮೊಗ್ಗ ವಿಭಾಗದ ಬೌದ್ಧಿಕ್ ಪ್ರಮುಖರಾದ ಲೋಹಿತಾಶ್ವ ಕರೆ ನೀಡಿದರು.
ನಗರದ ಕಾಟಪ್ಪನಹಟ್ಟಿಯಲ್ಲಿ ಆಯೋಜಿಸಲಾಗಿದ್ದ ‘ಹಿಂದೂ ಸಂಗಮ’ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ದೀಪವು ಜ್ಞಾನದ ಸಂಕೇತ. ನಮ್ಮ ಪರಂಪರೆಯಲ್ಲಿ ದೀಪ ಬೆಳಗುವುದು ಶುಭದ ಸಂಕೇತವೇ ಹೊರತು ದೀಪ ಆರಿಸುವುದಲ್ಲ
ಪಾಶ್ಚಿಮಾತ್ಯರ ಅಂಧಾನುಕರಣೆ ಮಾಡಿ ಹುಟ್ಟುಹಬ್ಬದ ದಿನ ದೀಪ ಆರಿಸುವ ಪದ್ಧತಿ ಬಿಡಬೇಕು
ಇತ್ತೀಚಿನ ದಿನಗಳಲ್ಲಿ ಟಿವಿ ಧಾರಾವಾಹಿ ಹಾಗೂ ಸಿನಿಮಾಗಳ ಪ್ರಭಾವದಿಂದ ನಮ್ಮ ಮನೆಯ ಆಚರಣೆಗಳು ದಾರಿ ತಪ್ಪುತ್ತಿವೆ. ಹಿಂದೆಲ್ಲಾ ವರನಟ ಡಾ.ರಾಜ್ಕುಮಾರ್ ಅವರ ಸಿನಿಮಾಗಳಲ್ಲಿ ಯಾರಾದರೂ ಮೃತಪಟ್ಟರೆ, ದೀಪ ಆರುವುದನ್ನು ತೋರಿಸುವ ಮೂಲಕ ಸಾವಿನ ಸೂಚನೆ ನೀಡಲಾಗುತ್ತಿತ್ತು. ಆದರೆ ಇಂದು ನಾವು ನಮ್ಮ ಮಕ್ಕಳ ಹುಟ್ಟುಹಬ್ಬದ ದಿನವೇ ಕೇಕ್ ಮೇಲಿರುವ ಕ್ಯಾಂಡಲ್ ಆರಿಸಿ ಸಂಭ್ರಮಿಸುತ್ತಿದ್ದೇವೆ. ಅರಿವಿದ್ದೋ, ಇಲ್ಲದೆಯೋ ಅಶುಭವಾದುದನ್ನು ಆಚರಣೆ ಮಾಡುತ್ತಿದ್ದೇವೆ. ದೀಪ ಬೆಳಗಿಸಿ ಆರತಿ ಮಾಡುವುದು ನಮ್ಮ ಮೂಲ ಪರಂಪರೆಯಾಗಿದ್ದು, ಅದನ್ನು ಉಳಿಸಿಕೊಳ್ಳಬೇಕು ಎಂದು ತಿಳಿಸಿದರು.
ಪ್ರತಿಯೊಬ್ಬರೂ ಮನೆಗೆ ಹೋದ ಬಳಿಕ ಹಿರಿಯರು ಮತ್ತು ಮಕ್ಕಳೊಂದಿಗೆ ಕುಳಿತು ಚರ್ಚಿಸಬೇಕು. 10-20 ವರ್ಷಗಳ ಹಿಂದೆ ನಮ್ಮ ಮನೆಯಲ್ಲಿ ಹಬ್ಬ ಹರಿದಿನಗಳನ್ನು ಎಷ್ಟು ಅರ್ಥಪೂರ್ಣವಾಗಿ ಆಚರಿಸುತ್ತಿದ್ದೆವು ಹಾಗೂ ಈಗಿನ ಆಚರಣೆಗಳಲ್ಲಿ ಏನೆಲ್ಲಾ ಬದಲಾವಣೆಗಳಾಗಿವೆ ಎಂಬುದನ್ನು ಪರಾಮರ್ಶಿಸಬೇಕು. ನಮ್ಮ ಮನೆಯಲ್ಲಿದ್ದ ಎಷ್ಟೋ ಒಳ್ಳೆಯ ಸಂಪ್ರದಾಯಗಳು ಬಿಟ್ಟು ಹೋಗಿದ್ದರೆ, ಅವುಗಳನ್ನು ಪುನಃ ಸರಿಪಡಿಸಿಕೊಳ್ಳುವ ಮೂಲಕ ಸಂಸ್ಕೃತಿಯನ್ನು ಉಳಿಸಬೇಕು ಎಂದು ಕಿವಿಮಾತು ಹೇಳಿದರು.
ರಾಷ್ಟ್ರೀಯ ಸ್ವಯಂ ಸಂಚಾಲಕರಾದ ರೂಪ ಮಾತನಾಡಿ,
ಹಿಂದೂ ನಾವೇಲ್ಲ ಬಂದು, ಎಂಬ ಮನೋಭಾವ ಪ್ರತಿ ಯೊಬ್ಬ ಹಿಂದೂವಿನಲ್ಲಿ ಹುಟ್ಟಬೇಕು ಆದ್ದರಿಂದ ಸನಾತನ ಧರ್ಮದಲ್ಲಿ ಹುಟ್ಟಿದ ನಾವು ನೀವು, ಪುರಾತನ ತಿ
ಇತಿಹಾಸ ಇರುವುಂತಹ ಧರ್ಮ ನಮ್ಮದಾಗಿದೆ, ಇಂತಹ ಧರ್ಮವನ್ನು ಮುಂದೆ ಕೊಡ್ಡಯ್ಯುವ ಇದರ ಪರಂಪರೆಯನ್ನು ಮುಂದಿನ ಪೀಳಿಗೆಗೆ ರವಾನೆ ಮಾಡುವಂತ ಕಾರ್ಯಮಾಬೇಕು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ, ಮುಖಂಡರಾದ ಬಾಳೆಕಾಯಿ ರಾಮದಾಸ್, ಯೋಗಗುರುಗಳಾದ ಮನೋಹರ್ , ಎವಿಬಿ ಮಂಜುನಾಥ್,
ಡಾ.ರಾಮರಾಜು, ಡಾ. ಮಂಜುನಾಥ್,ಮನೋಹರ್, ಶ್ರೀಮತಿ ರೂಪ, ಕಿಪರ್ ಕಾಟಯ್ಯ, ಸಂತೋಷ್, ಚನ್ನಕೇಶವ, ಶ್ರೀನಿವಾಸ್, ಮಧುರಾವ್, ಮಂಜಣ್ಣ,ಈಶ್ವರ ನಾಯಕ, ಜೆಕೆ ತಿಪ್ಪೇಸ್ವಾಮಿ, ಒಬ್ಬಕ್ಕ , ಕಾಂತರಾಜ್, ಸೇರಿದಂತೆ ನೂರಾರು ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಪೋಟೋ ; ಚಳ್ಳಕೆರೆ ನಗರದ ಕಾಟಪನಹಟ್ಟಿಯಲ್ಲಿ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತೀರ್ಥಹಳ್ಳಿಯ ಪ್ರಚಾರಕರು ಹಾಗೂ ಶಿವಮೊಗ್ಗ ವಿಭಾಗದ ಬೌದ್ಧಿಕ್ ಪ್ರಮುಖರಾದ ಲೋಹಿತಾಶ್ವ ಮಾತನಾಡಿದರು.


